ಕ್ಯಾಲಿಫೋರ್ನಿಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವಚಿತ್ರ ಮುದ್ರಿಸಿರುವ ಈಜು ಉಡುಗೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೇಸಿಗೆಯಲ್ಲಿ ಕಡಲತೀರಕ್ಕೆ ಭೇಟಿ ಕೊಡುವ ಪ್ರವಾಸಿಗರನ್ನು ಆರ್ಕಷಿಸುವ ಉದ್ದೇಶದಿಂದ ಕ್ಯಾಲಿಫೋರ್ನಿಯಾದ ಕಂಪೆನಿಯೊಂದು ಡೊನಾಲ್ಡ್ ಟ್ರಂಪ್ ಅಚ್ಚರಿಯ ಮುಖಭಾವದ ಚಿತ್ರವನ್ನು ಈಜುಡುಗೆ (ಸ್ವಿಮ್ ಸೂಟ್) ಮೇಲೆ ಮುದ್ರಿಸಿದೆ.
ಟ್ರಂಪ್ ಭಾವಚಿತ್ರದ ಸ್ವಿಮ್ ಸೂಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ‘ಇದನ್ನು ಟ್ರಂಪ್ ಅಭಿಮಾನಿಗಳೂ ಸಹ ತೊಡುತ್ತಾರೆ ಎಂಬುದು ಅನುಮಾನ’ ಎನ್ನುವಂತಹ ಅಭಿಪ್ರಾಯ ವ್ಯಕ್ತವಾಗಿದೆ.