ಚೀನಾಕ್ಕೆ ಮಹತ್ವ ನೀಡುತ್ತಿರುವ ಟ್ರಂಪ್ ಆಡಳಿತ ಭಾರತವನ್ನು ಕಡೆಗಣಿಸುತ್ತಿದೆ ಎಂಬ ವಾದವನ್ನು ತಳ್ಳಿ ಹಾಕಿದ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕಕ್ಕೆ ಭಾರತದ ಬಾಂಧವ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.
ಟ್ರಂಪ್ ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಾಗಿದ್ದು, ಈಗಾಗಲೇ ಮೋದಿ ಅವರೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ, ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣಾ ಪಾಲುದಾರಿಕೆ, ಜಾಗತಿಕ ಸಹಭಾಗಿತ್ವ, ವಾಣಿಜ್ಯ, ವ್ಯಾಪಾರ, ಇಂಧನ, ಕಾನೂನು ಜಾರಿ ಸೇರಿದಂತೆ ಅನೇಕ ಮಹತ್ವದ ವಿಷಯ ಟ್ರಂಪ್ ಮತ್ತು ಮೋದಿ ಮಾತುಕತೆ ವೇಳೆ ಚರ್ಚೆಗೆ ಬರಲಿವೆ ಎಂದರು.