ವಾಷಿಂಗ್ಟನ್ (ಎಎಫ್ಪಿ): ರಷ್ಯಾದಲ್ಲಿ ಆಶ್ರಯ ಪಡೆದಿರುವ ಎನ್ಎಸ್ಎಯ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ಕದ್ದು ಸೋರಿಕೆ ಮಾಡಿರುವ 17 ಲಕ್ಷ ರಹಸ್ಯ ದಾಖಲೆಗಳು ವಿಶ್ವದಲ್ಲಿ ಅಮೆರಿಕ ಸೇನಾ ಪಡೆಗಳನ್ನು ‘ಮಾರಣಾಂತಿಕ’ ಅಪಾಯಕ್ಕೆ ಸಿಲುಕಿಸಿರುವುದಾಗಿ ಪೆಂಟಗಾನ್ ವರದಿಯೊಂದು ಎಚ್ಚರಿಸಿದೆ.
ಅಮೆರಿಕದ ರಕ್ಷಣಾ ಇಲಾಖೆ ಸಿದ್ಧಪಡಿಸಿರುವ ಈ ವರದಿಯನ್ನು ಎಲ್ಲ ಸಂಸದರಿಗೂ ಗುರುವಾರ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.