ಇಸ್ಲಾಮಾಬಾದ್ (ಪಿಟಿಐ): ಲಂಡನ್ ಮೂಲದ, ಪಕ್ಷದ ಮುಖ್ಯಸ್ಥ ಅಲ್ತಫ್ ಹುಸೇನ್ ವಿರುದ್ಧ ಅವಮಾನಕರ ರೀತಿಯಲ್ಲಿ ವರದಿ ಪ್ರಕಟಿಸಿದ್ದಕ್ಕಾಗಿ ಪಾಕಿಸ್ತಾನದ ಎಂಕ್ಯುಎಂ ಪಕ್ಷವು ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಒಂದು ಕೋಟಿ ಡಾಲರ್ ( ` 63 ಕೋಟಿ) ಮಾನನಷ್ಟ ನೋಟಿಸ್ ಜಾರಿಮಾಡಿದೆ.
‘ಇದು ಆಧಾರರಹಿತ ವರದಿ. ಹುಸೇನ್ ಅವರ ಗೌರವಕ್ಕೆ ಚ್ಯುತಿ ಬಂದಿದೆ’ ಎಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ. ಪತ್ರಿಕೆಯ ಸಂಪಾದಕರು, ಮುದ್ರಕರು ಮತ್ತು ಈ ವರದಿ ಬರೆದ ಪತ್ರಕರ್ತ ಡಿಕ್ಲೇನ್ ವಾಷ್ ಅವರಿಗೆ 7 ದಿನಗಳಲ್ಲಿ ಬೇಷರತ್ ಕ್ಷಮೆ ಕೇಳುವಂತೆ ಪಕ್ಷವು ಸೂಚಿಸಿದೆ.