ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಅನವಶ್ಯಕ ಮಾತನಾಡದಿರಿ..

ನುಡಿ ಬೆಳಗು: ಅನವಶ್ಯಕ ಮಾತನಾಡದಿರಿ..
Published 8 ಜನವರಿ 2024, 18:42 IST
Last Updated 8 ಜನವರಿ 2024, 18:42 IST
ಅಕ್ಷರ ಗಾತ್ರ

ಅಧ್ಯಯನದಲ್ಲಿ ತೊಡಗಿದ್ದ ಗುರುವಿನ ಬಳಿಗೆ ಶಿಷ್ಯ ಮಾಧವ ಬಂದ. ಅವನಿಗೆ ತನ್ನ ಸಹಪಾಠಿಯ ಬಗ್ಗೆ ಹೇಳುವುದಿತ್ತು. ‘ಗುರುಗಳೇ ಆ ಶ್ಯಾಮ ಇದ್ದಾನಲ್ಲಾ, ಅವನು ಒಂದು ಮಾತನ್ನು ಹೇಳುತ್ತಿದ್ದ’ ಎಂದ.  ಗುರುಗಳು  ಅವನನ್ನು  ನೋಡುತ್ತಾ  ಹೌದೇ ಮಾಧವಾ, ಬಾ ಇಲ್ಲಿ ಕುಳಿತುಕೋ’ ಎಂದರು. ಗುರುಗಳು ತನ್ನ ಮಾತುಗಳನ್ನು ಕೇಳುತ್ತಾರೆಂದು ಮಾಧವ ಉತ್ಸಾಹದಿಂದ ಶ್ಯಾಮನ  ಬಗ್ಗೆ  ಹೇಳಲು  ಆರಂಭಿಸಿದನು.

ಗುರುಗಳು ಅವನ ಉತ್ಸಾಹವನ್ನು ಮುರಿಯುವವರಂತೆ ‘ಅವನಿಂದ ನಿನಗೇನಾದರೂ ತೊಂದರೆಯಾಯಿತೇ’ ಎಂದು ಕೇಳಿದರು ‘ಇಲ್ಲ ಗುರುಗಳೇ ಆದರೆ, ಅವನು ಆಡುತ್ತಿದ್ದ ಮಾತುಗಳು...’ ಎನ್ನುವಾಗ ಆ ಮಾತನ್ನು ಅರ್ಧಕ್ಕೆ ತುಂಡರಿಸುತ್ತಾ ‘ಅವನು  ಹೇಳಿದ್ದು ನಿನ್ನ ಬಗ್ಗೆಯಾ’ ಎಂದು ಕೇಳಿದರು.

‘ಇಲ್ಲ ಗುರುಗಳೇ’ ಎಂದ ಮಾಧವ. ಗುರುಗಳು ದೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ‘ಹಾಗಾದರೆ  ಅದು  ನನ್ನ  ಬಗ್ಗೆಯೇ ಇರಬೇಕು’ ಎಂದರು. ಶಿಷ್ಯನಿಗೆ ಇನ್ನೂ ಬೇಸರವಾಯಿತು.

‘ಛೇ. ಇಲ್ಲ ಗುರುಗಳೇ ಅದು ನಿಮ್ಮ ಬಗ್ಗೆಯೂ ಅಲ್ಲ. ನನ್ನ ಬಗ್ಗೆಯೂ ಅಲ್ಲ’ ಎಂದ ಶಿಷ್ಯ.

‘ಸರಿ ನಮ್ಮಿಬ್ಬರ ಬಗ್ಗೆಯೂ ಅಲ್ಲ ಎಂದರೆ ಆ ಮಾತುಗಳಿಂದ ಯಾರಿಗಾದರೂ ಮನಸ್ಸಿಗೆ ನೋವಾಗುತ್ತಿದೆಯೇ’ ಮರುಪ್ರಶ್ನೆ ಗುರುಗಳದು.  ಶಿಷ್ಯ ಮತ್ತಷ್ಟು ತಗ್ಗಿದ, ‘ಇಲ್ಲ ಗುರುಗಳೇ’  ಎಂದ. ಮತ್ತೆ ಗುರುಗಳು  ‘ಅದರಿಂದ  ಯಾರಿಗಾದರೂ ಉಪಯೋಗವಾಗುತ್ತಿದೆಯೇ’  ಎಂದು ಕೇಳಿದರು. ಅದಕ್ಕೂ ಶಿಷ್ಯ ‘ಇಲ್ಲ’ ಎಂದ.

‘ಹಾಗಿದ್ದರೆ ನಾವಿಬ್ಬರೂ ಶ್ಯಾಮನ ಬಗ್ಗೆ ಮಾತನಾಡುವುದರಲ್ಲಿ ಅರ್ಥವೇ ಇಲ್ಲ. ನಿರ್ದಿಷ್ಟವಾಗಿ ಯಾರಿಗೂ ಸಂಬಂಧಿಸದ, ಯಾವ ಪ್ರಯೋಜನವೂ ಇಲ್ಲದ ಮಾತುಗಳಿಂದ ನಿನ್ನ ಅಧ್ಯಯನದ ಸಮಯವನ್ನು ವ್ಯರ್ಥ ಮಾಡಿಕೊಂಡೆ. ಮತ್ತುನನ್ನದನ್ನುಕೂಡಾ. ಇಂಥಾ ವಿಷಯಗಳಿಗೆ ಮನಸ್ಸು ಕೊಡುವ ಬದಲು ಆ ಸಮಯವನ್ನು ಸದುಪಯೋಗ ಮಾಡಿಕೋ’ ಎನ್ನುತ್ತ ತಮ್ಮ  ಅಧ್ಯಯನದಲ್ಲಿ ತೊಡಗಿಕೊಂಡರು. 

ಉಪಯುಕ್ತ ಮಾತುಗಳಿಗೆ ಮಾತ್ರವೇ ಮಹತ್ವಇರುವುದೆಂದು ಅರಿತ ಶಿಷ್ಯ ಮತ್ತೆಂದೂ ವ್ಯರ್ಥ ಮಾತುಗಳನ್ನು ಆಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT