ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ರಾಜ್ಯಗಳ ಹಣಕಾಸು ಸ್ಥಿತಿ ತೀವ್ರ ಕುಸಿತ

Published 21 ಮಾರ್ಚ್ 2024, 0:04 IST
Last Updated 21 ಮಾರ್ಚ್ 2024, 0:04 IST
ಅಕ್ಷರ ಗಾತ್ರ

ರಾಜ್ಯಗಳ ಹಣಕಾಸು ಸ್ಥಿತಿ ತೀವ್ರ ಕುಸಿತ: ಪರಿಹಾರಕ್ಕೆ ಪಂಚ ಸೂತ್ರ

ನವದೆಹಲಿ, ಮಾರ್ಚ್‌ 20 (ಪಿಟಿಐ)– ರಾಜ್ಯಗಳ ಹಣಕಾಸು ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಇಂದು ಇಲ್ಲಿ ಎಚ್ಚರಿಸಿದರಲ್ಲದೆ, ಈ ಪರಿಸ್ಥಿತಿಯನ್ನು ನಿಭಾಯಿಸಲು ಐದಂಶಗಳ ಕಾರ್ಯಕ್ರಮವೊಂದನ್ನು ಮುಂದಿಟ್ಟರು.

‘ಬರೇ ಮಾತುಗಳಿಂದ ಫಲವಾಗದು. ಕಾರ್ಯ ಅಗತ್ಯ. ಈ (ಹಣಕಾಸು) ಬಿಕ್ಕಟ್ಟನ್ನು ಬಗೆಹರಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ’ ಎಂದು ಅವರು ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಹಣಕಾಸು ಉಪಸಮಿತಿಯ ಸಭೆಯಲ್ಲಿ ಹೇಳಿದರು.

ಬಿಹಾರದಿಂದ ಕೇಂದ್ರಪಡೆ ವಾಪಸಿಲ್ಲ– ಅಡ್ವಾಣಿ

ತಿರುವನಂತಪುರ, ಮಾರ್ಚ್‌ 20 (ಯುಎನ್‌ಐ)– ಕೇಂದ್ರ ಸರ್ಕಾರ ಬಿಹಾರದಿಂದ ತನ್ನ ಪಡೆಗಳಲ್ಲಿ ಒಂದು ಭಾಗವನ್ನು ವಾಪಸು ಕರೆಸಿದೆ ಎಂಬ ಆರೋಪವನ್ನು ಕೇಂದ್ರ ಗೃಹ ಸಚಿವ ಎಲ್‌.ಕೆ. ಅಡ್ವಾಣಿ ಅವರು ಇಂದು ಇಲ್ಲಿ ಅಲ್ಲಗಳೆದರು.

ಬಿಹಾರದಿಂದ ಕೇಂದ್ರದ ಪಡೆಗಳನ್ನು ವಾಪಸು ಪಡೆಯುವ ಉದ್ದೇಶವೇ ಇಲ್ಲ. ಬದಲಾಗಿ ಅಗತ್ಯವೆನಿಸಿದರೆ ಅಲ್ಲಿಗೆ ಇನ್ನಷ್ಟು ಪಡೆ ಕಳಿಸಲಾಗುವುದು ಎಂದು ಪತ್ರಿಕಾ ಸಂದರ್ಶನದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT