ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ರಾಜ್ಯದ ಹಗುರ ಬಜೆಟ್‌ ಕೊರತೆ ಏರದಂತೆ ಎಚ್ಚರಿಕೆ

Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು, ಮಾರ್ಚ್‌ 17– ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದ ರೂ.125 ಕೋಟಿಗಳ ಕೊರತೆಯ 1999–2000ನೇ ಸಾಲಿನ ಬಜೆಟ್ ಅನ್ನು ಹಣಕಾಸು ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.

ಬಜೆಟ್‌ ಕೊರತೆ ಪ್ರಮಾಣವನ್ನು ಕಳೆದ ಸಾಲಿನ ಕೊರತೆಯ ಪರಿಷ್ಕೃತ ಅಂದಾಜಿನ ಮಟ್ಟದಲ್ಲೇ ಇರಿಸಲಾಗಿದೆ. ರಸಗೊಬ್ಬರಗಳ ಮೇಲಿನ ಮಾರಾಟ ತೆರಿಗೆ, ಕಾಫಿ ಬೆಳೆ ಮೇಲೆ ಇದ್ದ ಕೃಷಿ ವರಮಾನ ತೆರಿಗೆ ಹಾಗೂ ವಾಹನಗಳ ವರ್ಗಾವಣೆ ಮಾರಾಟ ತೆರಿಗೆ ರದ್ದು ಮಾಡಲಾಗಿದೆ.

ಮೀಸಲಾತಿ ಸುತ್ತೋಲೆ ಸಂಸತ್‌ನಲ್ಲಿ ಕೋಲಾಹಲ

ನವದೆಹಲಿ, ಮಾರ್ಚ್‌ 17– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸುವ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಳುವ ಪಕ್ಷವನ್ನು ಹೊರತುಪಡಿಸಿ,
ಪ್ರತಿಪಕ್ಷಗಳ ದಲಿತ ವರ್ಗಗಳ ಸದಸ್ಯರು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರಿಂದ ಲೋಕಸಭೆಯ ಕಲಾಪ ಇಂದು ನಡೆಯಲಿಲ್ಲ.

ಬೂಟಾ ಸಿಂಗ್‌ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ವರ್ಗದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಅಂಗಳಕ್ಕೆ ಧಾವಿಸಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT