ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ: ಕ್ಯಾನ್ಸರ್ ವಿರುದ್ಧ ಬದಲಿ ಅಂಗಾಂಶ ಜೋಡಣೆ

Published 26 ಮೇ 2024, 16:02 IST
Last Updated 26 ಮೇ 2024, 16:02 IST
ಅಕ್ಷರ ಗಾತ್ರ

ಜೈಪುರ, ಮೇ 27– ರೋಗಿಯೊಬ್ಬರ ಕತ್ತಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದ ಭಾಗ ತೆಗೆದುಹಾಕಿ, ಆಕೆಯ ದೇಹದ ಬೇರೆಡೆಗಳಿಂದ ತೆಗೆದ ಅಂಗಾಂಶಗಳನ್ನು ಜೋಡಿಸುವ ಯಶಸ್ವಿ ಶಸ್ತ್ರಕ್ರಿಯೆಯೊಂದು ಭಾರತದಲ್ಲೇ ಪ್ರಥಮ ಬಾರಿಗೆ ನಡೆಯಿತು.

ಸವಾಯಿ ಮಾನ್‌ಸಿಂಗ್ ಆಸ್ಪತ್ರೆಯ ವೈದ್ಯೆ ಡಾ. ಬಿ.ಎಸ್. ಚಾಂದೋಲಿಯಾ ಅವರು ಶಸ್ತ್ರಕ್ರಿಯೆ ಪೂರೈಸಲಾಯಿತೆಂದು ಇಂದು ತಿಳಿಸಿದರು.

ಗಲ್ಲ ಮತ್ತು ಗಂಟಲುಗಳಲ್ಲಿ ಕಾಣಿಸಿಕೊಂಡಿದ್ದ ಕ್ಯಾನ್ಸರ್ ಹಿಡಿದ ಅಂಗಾಂಶಗಳನ್ನು ತೆಗೆದು ಹಾಕಿ ಹಣೆ, ಭುಜ ಮತ್ತು ಎದೆ ಭಾಗಗಳಿಂದ ಕೊಯ್ದು ತೆಗೆದ ಚರ್ಮ ಮತ್ತು ಅಂಗಾಂಶಗಳನ್ನು ಅಲ್ಲಿಗೆ ಜೋಡಿಸಲಾಯಿತು.

ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ

ಬೆಂಗಳೂರು, ಮೇ 26– ಈ ತಿಂಗಳು 31ರಿಂದ ಮೂರು ದಿನಗಳ ಕಾಲ ನಡೆಯುವ 48ನೆಯ ಸಾಹಿತ್ಯ ಸಮ್ಮೇಳನಕ್ಕಾಗಿ ಹೊರಗಡೆಯಿಂದ ಬರುವ 2 ಸಾವಿರ ಜನಪ್ರತಿ ನಿಧಿಗಳು ಇಳಿದುಕೊಳ್ಳಲು ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಮಂಡ್ಯದ ಕೆಲವು ಮಹನೀಯರು ಪ್ರತಿನಿಧಿಗಳಿಗಾಗಿ ತಮ್ಮ ಮನೆ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಸಮ್ಮೇಳನಕ್ಕೆ ಬರುವ ಮಹಿಳಾ ಪ್ರತಿನಿಧಿಗಳನ್ನು ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಇಳಿಸಲು ವ್ಯವಸ್ಥೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT