ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ‌| ಅನೇಕರಿಗೆ ರಾಜಕೀಯ ಒಂದು ಕಸುಬು ಎಂದಿದ್ದ ದೇವರಾಜ ಅರಸು

Published 30 ಮೇ 2024, 22:42 IST
Last Updated 30 ಮೇ 2024, 22:42 IST
ಅಕ್ಷರ ಗಾತ್ರ

‘ಅನೇಕರಿಗೆ ರಾಜಕೀಯ ಒಂದು ಕಸುಬು’

ಬೆಂಗಳೂರು, ಮೇ 30– ರಾಜಕೀಯದಲ್ಲಿ ಜನಪ್ರತಿನಿಧಿಗಳಾಗಿರುವವರು, ‘ತಾವು ಎಲ್ಲಿವರೆಗೆ ಸಂಪಾದನೆಗೆ ಬಂದಿದ್ದೇವೆ ಎಂದು ತಿಳಿದುಕೊಂಡಿರುತ್ತಾರೋ ಅದುವರೆಗೆ ಸಮಾಜವಾದವೂ ಬಾರದು, ಸಾಮಾಜಿಕ ನ್ಯಾಯವೂ ಸಿಗದು’ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.

ಬಹುತೇಕ ಮಂದಿ ಶಾಸಕರಿಗೆ, ಜನಜೀವನದ ಕಷ್ಟಕಾರ್ಪಣ್ಯಗಳ ಅರಿವಿಲ್ಲ, ಅರಿಯುವ ಪ್ರಯತ್ನವೂ ಇಲ್ಲ ಎಂದು ಅರಸು ಹೇಳಿದರು.

‘ಬಹುಮಂದಿಗೆ ರಾಜಕೀಯ ಎಂಬುದೊಂದು ಉದ್ಯೋಗ. ಚುನಾವಣೆ ಬಂತು, ಟಿಕೆಟ್ ಸಿಕ್ಕಿತು, ಮೆಂಬರ್ ಆದರು. ಅದನ್ನು ಕಸುಬಾಗಿ ಹಿಡಿದು ಮುಂದುವರಿ
ಯುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT