ಬೆಂಗಳೂರಿನ ಓ ಮತದಾರರೆ, ನೋಡಲು ಮರೆಯದಿರಿ ಸದ್ಯದಲ್ಲೇ ನಡೆಯಲಿದೆ ಬಿಬಿಎಂಪಿ 20– 20 ಮ್ಯಾಚ್. ಕೆಲ ವರ್ಷಗಳ ಹಿಂದೆ ಅಖಿಲ ಕರ್ನಾಟಕ ಮಟ್ಟದಲ್ಲಿ ನಡೆದ ರೀತಿಯಲ್ಲಿ ನಮ್ಮ ಬೆಂಗಳೂರು ಜಿಲ್ಲಾ ಮಟ್ಟದ ಸ್ಪರ್ಧೆ. ಸಿ- ಕ್ಲಬ್, ಜೆ- ಕ್ಲಬ್ ಮತ್ತು ಬಿ- ಕ್ಲಬ್ ತಂಡಗಳು ಮ್ಯಾಚ್ನಲ್ಲಿ ಪಾಲ್ಗೊಳ್ಳಲಿವೆ.
ಕ್ಲಬ್ಗಳ ಮಾಲೀಕರು ಹಿಂದಿನವರೇ. ಆದರೆ, ನಾಯಕರು ಮಾತ್ರ ಬದಲಾಗಿದ್ದಾರೆ. ಕೆಲ ಆಟಗಾರರ ಹರಾಜು ಪ್ರಕ್ರಿಯೆ ಚಾಲನೆಯಲ್ಲಿದೆ. ಪ್ರಕ್ರಿಯೆ ಮುಗಿದ ಕೂಡಲೇ ಆಟ ಆರಂಭ. ಮೊದಲು ಯಾರು ಬ್ಯಾಟ್ ಮಾಡುತ್ತಾರೆ ಎಂಬುದೇ ಸದ್ಯದ ಕುತೂಹಲ. ಬೆಂಗಳೂರಿನ ಮತದಾರರಿಗೆ ಜೈ.