ಗುರುವಾರ , ಅಕ್ಟೋಬರ್ 1, 2020
21 °C

ವಾಚಕರ ವಾಣಿ | ಕ್ವಾರಂಟೈನ್‌: ಮುಖ್ಯಮಂತ್ರಿಗೇಕೆ ವಿನಾಯಿತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಸರಿಯಷ್ಟೇ. ಆದರೆ ಅವರು ಅಲ್ಲಿ ಸರ್ಕಾರದ ಕಡತ ಪರಿಶೀಲನೆ, ಮಂಜೂರಾತಿ, ಸಹಿ ಎಂದು ಕಾರ್ಯ ನಿರ್ವಹಿಸುತ್ತಿದ್ದಾರೆಂದು ವರದಿಯಾಗಿದೆ. ಇಂತಹ ಕಾರ್ಯಕ್ಕಾಗಿ ಆಸ್ಪತ್ರೆಗೆ ಕಡತ ಹೊತ್ತು ತರುವ ಸಿಬ್ಬಂದಿ, ಅಧಿಕಾರಿಗಳಿಗೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ಅನಿವಾರ್ಯ. ಎಷ್ಟೇ ನಿಗಾ ವಹಿಸಿದರೂ ಸೋಂಕಿನ ಆತಂಕ ತಪ್ಪಿದ್ದಲ್ಲ. ಇದರ ಜೊತೆಗೆ, ಅವರು ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಚಿತ್ರಗಳನ್ನು ತೆಗೆದು, ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಇದರ ಅಗತ್ಯವಿತ್ತೇ? ಕೊರೊನಾ ಸೋಂಕಿತರು ಯಾರೇ ಆಗಿರಲಿ ಅವರು ಇತರರೊಂದಿಗೆ ಸಂಪರ್ಕವನ್ನು ನಿಲ್ಲಿಸಿದರೆ ಅದು ಎಲ್ಲರಿಗೂ ಕ್ಷೇಮ.

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು