ಶುಕ್ರವಾರ, ಡಿಸೆಂಬರ್ 13, 2019
24 °C

ಶುದ್ಧ ಆಮ್ಲಜನಕ: ಎಲ್ಲರೂ ಹಣ ತೆರಬೇಕಾಗಿದ್ದರೆ?

ವಾಚಕರವಾಣಿ Updated:

ಅಕ್ಷರ ಗಾತ್ರ : | |

ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಆರಂಭವಾಗಿರುವ ‘ಆಕ್ಸಿಪ್ಯೂರ್’ ಎಂಬ ಆಮ್ಲಜನಕದ ಬಾರ್ ಬಗ್ಗೆ ಓದಿ ಗಾಬರಿಯಾಯಿತು (ಪ್ರ.ವಾ., ನ. 17). ಶುದ್ಧ ಆಮ್ಲಜನಕ ಸಿಗದೆ ರಾಜಧಾನಿಯಲ್ಲಿ ಉಸಿರಾಟದ ತೊಂದರೆ ಹೆಚ್ಚುತ್ತಿರುವುದನ್ನು ಕಂಡರೆ, ಮಾನವನು ಪ್ರಕೃತಿ ವಿನಾಶದ ಹರಿಕಾರ ಎಂಬುದು ಗಮನಕ್ಕೆ ಬರುತ್ತದೆ. ಕೇವಲ 15 ನಿಮಿಷ ಶುದ್ಧ ಆಮ್ಲಜನಕ ಉಸಿರಾಡಲು ₹299 ಪಾವತಿಸಬೇಕಾಗಿರುವುದು ವಿಪರ್ಯಾಸವೇ ಸರಿ. ಇದೇ ರೀತಿ, ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಿಗುತ್ತಿರುವ ಶುದ್ಧ ಆಮ್ಲಜನಕಕ್ಕೆ ಹಣ ತೆರಬೇಕಾಗಿದ್ದರೆ ನಮ್ಮ ಗತಿ ಏನಾಗುತ್ತಿತ್ತು?

ಪ್ರಕೃತಿ ಉಳಿಯುವುದಕ್ಕೆ, ಬೆಳೆಯುವುದಕ್ಕೆ ಬುನಾದಿಯಾಗಬೇಕಿರುವ ಪ್ರಮುಖ ಜೀವಿಯೆಂದರೆ ಮಾನವ. ಆದರೆ, ಆತ ಸ್ವತಃ ಪ್ರಕೃತಿ ನಾಶಕ್ಕೆ ಟೊಂಕ ಕಟ್ಟಿ ನಿಂತಿದ್ದಾನೆ. ಮುಂದಿನ ದಿನಗಳಲ್ಲಾದರೂ ಇಂತಹ ವಿಪತ್ಕಾರಕ ಕೃತ್ಯಗಳನ್ನು ನಿಲ್ಲಿಸಿ ಸ್ವಚ್ಛಂದ ಪರಿಸರವನ್ನು ಕಾಪಾಡಿಕೊಂಡು, ಆರೋಗ್ಯಕರ ಜೀವನ ನಡೆಸೋಣ. ಮುಂದಿನ ನಮ್ಮ ಪೀಳಿಗೆಗೆ ಆರೋಗ್ಯಕರ ಜೀವನ ಶೈಲಿಯನ್ನು ಬಳುವಳಿಯಾಗಿ ನೀಡುವ ಪಣತೊಟ್ಟು ಕಾರ್ಯೋನ್ಮುಖರಾಗೋಣ.

ಶೈಲಜಾ ವಿ., ಕೋಲಾರ

ಪ್ರತಿಕ್ರಿಯಿಸಿ (+)