ಚಾರಿತ್ರ್ಯಕ್ಕೆ ಹಿಡಿದ ಕನ್ನಡಿ

7

ಚಾರಿತ್ರ್ಯಕ್ಕೆ ಹಿಡಿದ ಕನ್ನಡಿ

Published:
Updated:

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಟಿ.ವಿ ಕಾರ್ಯಕ್ರಮದಲ್ಲಿ ಭಾರತದ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಪಾಲ್ಗೊಂಡು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಸೆಲೆಬ್ರಿಟಿಗಳು ಮಾಧ್ಯಮ ಸಂದರ್ಶನ ಅಥವಾ ಟೆಲಿವಿಷನ್ ಷೋನಲ್ಲಿ ಪಾಲ್ಗೊಳ್ಳುವುದು ತಪ್ಪಲ್ಲ. ಆದರೆ, ಆ ಕಾರ್ಯಕ್ರಮದ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಪಡೆದು, ಯಾವ ರೀತಿ ಅಲ್ಲಿ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಿಕೊಳ್ಳಬೇಕು ಎಂಬುದನ್ನು ಅವರು ಅರಿತಿರಬೇಕು. ಮಾತುಗಾರಿಕೆ, ಹರಟೆ ಸೇರಿದಂತೆ ಆಟಗಾರರ ಎಲ್ಲ ಆಗುಹೋಗುಗಳನ್ನೂ ಸಮಾಜ ಗಮನಿಸುತ್ತಾ ಇರುತ್ತದೆ. ಹೀಗಿರುವಾಗ, ಕ್ರಿಕೆಟಿಗರು ತಮ್ಮ ಮುಕ್ತ ಲೈಂಗಿಕತೆಯ ಬಗ್ಗೆ ಎಗ್ಗಿಲ್ಲದೇ ಹೇಳಿಕೆ ನೀಡಿರುವುದು ತಪ್ಪು. ಕೆಲವು ಹೇಳಿಕೆಗಳು ಅವರವರ ಚಾರಿತ್ರ್ಯಕ್ಕೆ ಕನ್ನಡಿ ಹಿಡಿಯುತ್ತವೆ. 

ಹೆಣ್ಣಿನ ಮೇಲೆ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ನಡೆಯುತ್ತಿದೆ. ಇಂದಿನ ಯುವಜನಾಂಗದಲ್ಲಿ ಅವಳನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕಾದ ಅಗತ್ಯವಿದೆ. ಈ ರೀತಿಯ ಟೆಲಿವಿಷನ್ ಕಾರ್ಯಕ್ರಮಗಳು ಅಂತಹ ನಡೆಗೆ ಸ್ಫೂರ್ತಿಯಾಗಬೇಕೇ ಹೊರತು, ಹೆಣ್ಣನ್ನು ಕೀಳು ಮಟ್ಟದಲ್ಲಿ ನೋಡುವಂತಹ ಪ್ರವೃತ್ತಿಯನ್ನು ಉತ್ತೇಜಿಸುವಂತೆ ಅಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !