ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ದಂಡ ಲಂಚಕ್ಕೆ ರಹದಾರಿ

ಅಕ್ಷರ ಗಾತ್ರ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ₹ 500 ಹಾಗೂ ನಗರ ಪ್ರದೇಶ
ಗಳಲ್ಲಿ ₹ 1,000 ದಂಡ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಕೊರೊನಾ ಸೋಂಕನ್ನು ನಿರ್ಲಕ್ಷಿಸಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡುವವರಿಗೆ ಇದು ಎಚ್ಚರಿಕೆಯ ಗಂಟೆ ಎಂಬುದೇನೋ ಸರಿ. ಆದರೆ ದಂಡದ ಪ್ರಮಾಣ ಹೆಚ್ಚಾಯಿತು. ದಂಡ ಕಟ್ಟಬೇಕಾದವರ
ಜೇಬಿನಲ್ಲಿ ಸಾವಿರ ರೂಪಾಯಿ ಇಲ್ಲದಿದ್ದರೆ ಏನು ಮಾಡಬೇಕು? ಬದಲಾಗಿ ಸ್ಥಳದಲ್ಲಿಯೇ ಮಾಸ್ಕ್ ಒದಗಿಸಿ, ₹ 200 ದಂಡ ವಿಧಿಸುವುದು ಒಳಿತು. ದಂಡದ ಮೊತ್ತ ಹೆಚ್ಚಾದಷ್ಟೂ ಲಂಚದ ಹಾವಳಿ ಹೆಚ್ಚಾಗುತ್ತದೆ.

ವಿಪರ್ಯಾಸವೆಂದರೆ, ಮಾಸ್ಕ್‌ ಹಾಕದ ವಾಹನ ಸವಾರರನ್ನೇ ಹೆಚ್ಚು ಗುರಿ ಮಾಡಿ, ಗುಂಪು ಗುಂಪಾಗಿ ಅಲೆಯುವ ಪಾದಚಾರಿಗಳನ್ನು
ಬಿಡಲಾಗುತ್ತಿದೆ. ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ಮಾಸ್ಕ್ ಧರಿಸದೇ ಪಾಲ್ಗೊಂಡಿದ್ದ ಶಾಸಕರಿಗೆ ಏಕೆ ದಂಡ ವಿಧಿಸಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ.

ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT