ಭಾನುವಾರ, ಆಗಸ್ಟ್ 25, 2019
26 °C

ಸ್ವಾತಂತ್ರ್ಯ ದಿನಾಚರಣೆ ಪರಿಸರಸ್ನೇಹಿಯಾಗಲಿ

Published:
Updated:

ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾಕಾಲೇಜು, ಕಚೇರಿಗಳಲ್ಲಿ ಬಹುಮಟ್ಟಿಗೆ ಪರಿಸರಕ್ಕೆ ಹಾನಿಯಾಗು
ವಂತಹ ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಾವುಟ ಮತ್ತಿತರ ವಸ್ತುಗಳನ್ನು ಬಳಸಲಾಗುತ್ತದೆ. ಇದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯು ಅರಿವು ಮೂಡಿಸಬೇಕು. ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಖಾದಿ ಧ್ವಜ ಬಳಸುವಂತೆ ಆಗಬೇಕು.

ಪ್ಲಾಸ್ಟಿಕ್‌ ಧ್ವಜ ಬಳಕೆ ಬೇಡ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಗಣ್ಯರು ಹಾಗೂ ಅತಿಥಿಗಳಿಗೆ ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಗಾಜಿನ ಲೋಟಗಳಲ್ಲಿ ನೀರನ್ನು ನೀಡಬೇಕು. ಈ ಮೂಲಕ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯು ಪರಿಸರಸ್ನೇಹಿ ಸ್ವಾತಂತ್ರ್ಯ ದಿನಾಚರಣೆಯಾಗಲು ಎಲ್ಲರೂ ಸಹಕರಿಸೋಣ.

ಸುದರ್ಶನ್ ಎಚ್.ಎನ್., ಹೆತ್ತೂರು, ಹಾಸನ

Post Comments (+)