ತಕರಾರು ಟಿಪ್ಪು ಭವನ ಹೆಸರಿಗಲ್ಲ!

7

ತಕರಾರು ಟಿಪ್ಪು ಭವನ ಹೆಸರಿಗಲ್ಲ!

Published:
Updated:

‘ಹೆಸರಿಗೆ ತಕರಾರೇಕೆ?’ (ವಾ.ವಾ., ಜೂನ್‌ 26) ಎಂಬ ಕೊ.ಸು. ನರಸಿಂಹಮೂರ್ತಿ ಅವರ ಪತ್ರಕ್ಕೆ ಈ ಪ್ರತಿಕ್ರಿಯೆ.

ಸಚಿವ ಜಮೀರ್ ಅಹ್ಮದ್ ಅವರು ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾವ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ನರಸಿಂಹಮೂರ್ತಿ, ‘ಅದು ಹಿಂದೂಗಳದ್ದೇನಲ್ಲವಲ್ಲ, ಇಂಥದ್ದೇ ಹೆಸರಿಡಿ ಎಂದು ಹೇಳಲು ನಾವ್ಯಾರು’ ಎಂದು ಪ್ರಶ್ನಿಸಿದ್ದಾರೆ.

ಇಲ್ಲಿ ಹಿಂದೂ– ಮುಸ್ಲಿಂ ಅನ್ನುವುದಕ್ಕಿಂತ ಮೊದಲು ನಾವೆಲ್ಲರೂ ಭಾರತೀಯರು ಎಂಬುದನ್ನು ಅರಿಯಬೇಕು. ಟಿಪ್ಪು ಒಬ್ಬ ವಿವಾದಾತ್ಮಕ ವ್ಯಕ್ತಿ ಅನ್ನುವುದಕ್ಕೋಸ್ಕರ ಕೆಲವರು ಆ ಹೆಸರು ಬೇಡ ಎಂದು ಹೇಳುತ್ತಿರಬಹುದೇ ವಿನಾ, ಮುಸ್ಲಿಂ ನಾಯಕರ ಹೆಸರಿಡಬೇಡಿ ಎಂದು ಹೇಳಿಲ್ಲವಲ್ಲ? ಅಷ್ಟಕ್ಕೂ ‘ಹಜ್ ಭವನ’ ಎಂಬ ಈಗಿರುವ ಹೆಸರು ಕೆಟ್ಟದಾಗಿದೆಯೇ?

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !