ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಕಾಲೊನಿ ಅಗತ್ಯವಿದೆಯೇ?

Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಲೈಂಗಿಕ ಶೋಷಿತರ ಮಕ್ಕಳನ್ನು ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಸೌಲಭ್ಯ (ಪ್ರ.ವಾ., ಜುಲೈ 7) ಕಲ್ಪಿಸುವ ನಿರ್ಧಾರ ಸ್ವಾಗತಾರ್ಹ. ಆದರೆ ಇದಕ್ಕೆ ತದ್ವಿರುದ್ಧವೆಂಬಂತಹ ಮತ್ತೊಂದು ಸುದ್ದಿಯೂ ಇದೇ ದಿನ ಪ್ರಕಟವಾಗಿದೆ. ಲೈಂಗಿಕ ಶೋಷಣೆಗೆ ತುತ್ತಾದವರಿಗಾಗಿ ಜಾರಿಗೊಳಿಸಿರುವ ಸರ್ಕಾರಿ ಸೌಲಭ್ಯವು ನಾನಾ ಇಲಾಖೆ ಅಧಿಕಾರಿಗಳ ಹೊಣೆಗೇಡಿತನದಿಂದ ಅರ್ಹರಿಗೆ ದಕ್ಕದೆ ಆಕಾಶಕ್ಕೆ ಏಣಿ ಇಟ್ಟಂತಾಗಿದೆ.

ದಮನಕ್ಕೊಳಗಾದ ಮಹಿಳೆಯರನ್ನು ಪ್ರತ್ಯೇಕರಂತೆ ಕಾಣುವ ಅಧಿಕಾರಿಗಳ ನಡವಳಿಕೆ ನಾಚಿಕೆಗೇಡಿನದು. ಅಷ್ಟಕ್ಕೂ ಇಂತಹವರಿಗಾಗಿ ಪ್ರತ್ಯೇಕ ಕಾಲೊನಿ ನಿರ್ಮಿಸುವ ಅಗತ್ಯವಾದರೂ ಏನು? ಇದರಿಂದ, ‘ನೀವು ಶೋಷಣೆಗೆ ಒಳಗಾದವರು’ ಎಂದು ಪದೇಪದೇ ಅವರಿಗೆ ಜ್ಞಾಪಿಸುತ್ತಾ ಮಾನಸಿಕ ಕಿರುಕುಳ ನೀಡಿದಂತೆ ಆಗುವುದಿಲ್ಲವೇ? ಹೆಸರಿಗೆ ಮಾತ್ರ ಸೌಲಭ್ಯ ಎಂಬಂತೆ ಆಗಬಾರದು. ಸರ್ಕಾರವೆಂಬ ‘ದೇವರು’ ಕಲ್ಪಿಸಿರುವ ಸೌಲಭ್ಯವನ್ನು ಅಧಿಕಾರಿಗಳೆಂಬ ‘ಪೂಜಾರಿ’ಗಳು ಆದಷ್ಟು ಬೇಗ ಒದಗಿಸುವ ಮನಸ್ಸು ಮಾಡಬೇಕಾಗಿದೆ.

ರಾಧಿಕಾ,ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT