ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿನ ಚೀಟಿ ಇರಲಿ

Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ದಿಗಿಲುಗೊಳ್ಳುವಂತಹ ವಿಡಿಯೊ ತುಣುಕುಗಳು ಕಂಡುಬರುತ್ತಿವೆ. ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರುವವರು ತರಕಾರಿ ತಾಜಾ ಆಗಿ ಕಾಣುವಂತೆ ಮಾಡಲು ಮೋರಿ ನೀರಿನಲ್ಲಿ ತೊಳೆಯುವುದು, ರಸ್ತೆ ಬದಿಯ ಮರಗಳ ಮರೆಯಲ್ಲಿ ಮಲ–ಮೂತ್ರ ಮಾಡಿ, ತಕ್ಕಡಿಯ ಬಟ್ಟಲಲ್ಲಿ ನೀರು ಕೊಂಡೊಯ್ದು ತೊಳೆದುಕೊಳ್ಳುವುದು, ಸತ್ತ ಮೀನುಗಳ ಹೊಟ್ಟೆಯೊಳಗೆ ರಂಧ್ರ ಮಾಡಿ ಯಾವುದೋ ಔಷಧಿಯನ್ನು ಸೇರಿಸುವುದು- ಇನ್ನೂ ಅನೇಕ ಅಸಹ್ಯಕರವಾದ ದೃಶ್ಯಗಳು ಕಾಣಿಸುತ್ತಿವೆ.

ಸರ್ಕಾರವು ಪ್ರತಿಯೊಬ್ಬ ತಳ್ಳುಗಾಡಿಯವರಿಗೂ ವ್ಯಾಪಾರ ಮಾಡಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಎಲ್ಲರಿಗೂ ಒಂದು ಗುರುತಿನ ಚೀಟಿ ಕೊಟ್ಟು, ಅದು ಅವರ ಕತ್ತಿನಲ್ಲಿ ಇರಲೇಬೇಕೆಂದು ನಿಯಮ ರೂಪಿಸಬೇಕು. ಅದರಲ್ಲಿ ಅವರ ಹೆಸರು, ವಿಳಾಸ, ಫೋನ್ ನಂಬರ್, ಕಾರ್ಡ್ ನಂಬರ್ ಮುದ್ರಿಸಬೇಕು. ಆಗ, ಇವು ನಕಲಿ ವಿಡಿಯೊ ತುಣುಕುಗಳಲ್ಲದೆ ನಿಜವಾಗಲೂ ಯಾರಾದರೂ ಹಾಗೆ ಮಾಡಿದ್ದರೂ ಅಂತಹವರನ್ನು ಗುರುತಿಸಲು ಸುಲಭವಾಗುತ್ತದೆ. ಇಂತಹ ಕೃತ್ಯ ದೃಢಪಟ್ಟರೆ, ಆಹಾರ ಸುರಕ್ಷಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಹ ಸಾಧ್ಯವಾಗುತ್ತದೆ.ಮಣ್ಣೆ ಮೋಹನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT