ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಶಾಖೆಗಳ ಸುಧಾರಣೆಗೆ ಬೇಕು ಕಾಯಕಲ್ಪ

ಅಕ್ಷರ ಗಾತ್ರ

ಪ್ರಾದೇಶಿಕ ಜ್ಞಾನವು ಮದ್ದಾಗದ ಹಿತ್ತಲಗಿಡದಂತೆ ಆಗಿರುವ ಬಗ್ಗೆ ಕೆ.ಟಿ.ಸತ್ಯಜಿತ್ ಅವರು ಬರೆದಿರುವ ಲೇಖನ (ಪ್ರ.ವಾ., ಡಿ. 11) ವಾಸ್ತವಿಕ ನೆಲೆಗಟ್ಟಿನಲ್ಲಿ ಮೂಡಿಬಂದಿದೆ. ಭಾರತೀಯ ಸಂಸ್ಕೃತಿ, ಪರಂಪರೆಯು ಅನಾದಿ ಕಾಲದಿಂದಲೂ ಶ್ರೇಷ್ಠವಾಗಿದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ತತ್ವಜ್ಞಾನದ ಮೂಲ ಬೇರುಗಳನ್ನು ಹೊಂದಿದೆ. ಆದರೆ ಬ್ರಿಟಿಷರ ಆಳ್ವಿಕೆಯ ದಟ್ಟ ಪ್ರಭಾವದಿಂದ ಅದರ ಬೆಳಕು ಕಡಿಮೆಯಾದಂತೆ ಕಾಣುತ್ತಿದೆ.

ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಮತ್ತೆ ಇಲ್ಲಿ ಜ್ಞಾನಶಾಖೆಗಳು ಉತ್ಕೃಷ್ಟ ಮಟ್ಟದ ಸುಧಾರಣೆ ಕಾಣಬೇಕೆಂದರೆ, ಇಲ್ಲಿಯ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಬೇಕಾದ ಅಗತ್ಯವಿದೆ. ಪ್ರಾಥಮಿಕ ಶಿಕ್ಷಣದಿಂದ ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತಬೇಕು. ಪ್ರಾಯೋಗಿಕ ಹಾಗೂ ಕೌಶಲ ಆಧಾರಿತ ಕಲಿಕೆಗೆ ಒತ್ತು ನೀಡಬೇಕು. ಹಾಗೆಯೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಬೋಧನಾ ಪ್ರಕ್ರಿಯೆ ನಡೆಯಬೇಕು. ಹಾಗಾದಾಗ ಉತ್ತಮ ನಿರೀಕ್ಷೆ ಹೊಂದಬಹುದು.

- ಡಾ. ಸಂಜೀವಕುಮಾರ ಅತಿವಾಳೆ, ಬೀದರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT