ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಸಮಾಲೋಚಕರ ನೇಮಕವಾಗಲಿ

ಅಕ್ಷರ ಗಾತ್ರ

ರಾಜ್ಯದಲ್ಲಿ ಶಾಲೆ, ಕಾಲೇಜುಗಳನ್ನು ಪ್ರಾರಂಭಿಸುವುದಕ್ಕೆ ಮುನ್ನ, ಪ್ರತೀ ಶಾಲೆ, ಕಾಲೇಜಿನಲ್ಲೂ ಒಬ್ಬರು ಆಪ್ತ ಸಮಾಲೋಚಕರನ್ನು ಸರ್ಕಾರ ನೇಮಿಸಬೇಕು. ಕೊರೊನಾ ಸೋಂಕಿನ ಕಾರಣದಿಂದ ಪಾಲಕರು ತಮ್ಮ ಮಕ್ಕಳನ್ನು ಭಯ, ಆತಂಕದ ಮನಃಸ್ಥಿತಿಯಲ್ಲೇ ಕಳುಹಿಸಲು ಮನಸ್ಸು ಮಾಡಬಹುದು. ಮಕ್ಕಳು ಸಹ ಅಳುಕಿನಿಂದಲೇ ಶಾಲೆಗೆ ಬರಬಹುದು.

ಈ ಭಯವು ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಅವರ ಆಲೋಚನಾ ಕ್ರಮದ ಮೇಲೆ ಪರಿಣಾಮ ಬೀರಬಹುದು. ಗ್ರಹಿಕೆಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಲ್ಲಿನ ಒತ್ತಡ ನಿವಾರಿಸಬೇಕಾದುದು ಅತ್ಯಗತ್ಯ. ಜೊತೆಗೆ ಪಾಲಕರ ವಿಶ್ವಾಸ ಗಳಿಸುವುದೂ ಅಷ್ಟೇ ಮುಖ್ಯವಾಗಿರುತ್ತದೆ. ಇದು ಕೈಗೂಡಿದಾಗ ಮಕ್ಕಳನ್ನು ಸಹಜ ಮನಃಸ್ಥಿತಿಯಲ್ಲಿ ಕೂರಿಸಿ ಬೋಧಿಸಲು ಸಾಧ್ಯ.

- ನಾಗೇಶ್ ಹರಳಯ್ಯ,ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT