ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆ ಬಿಟ್ಟರೆ ಒಳಿತು

Last Updated 24 ಜೂನ್ 2018, 17:34 IST
ಅಕ್ಷರ ಗಾತ್ರ

ರಾಜ್ಯದ ಸಮ್ಮಿಶ್ರ ಸರ್ಕಾರ ಇನ್ನೂ ಸರಿಯಾಗಿ ಟೇಕಾಫ್‌ ಆಗಿಲ್ಲ. ಅಷ್ಟರಲ್ಲೇ ಸಚಿವ ಜಮೀರ್ ಅಹಮದ್ ಅವರು ಟಿಪ್ಪು ಹೆಸರಿನಲ್ಲಿ ಮತ್ತೆ ವಿವಾದವನ್ನು ಹುಟ್ಟುಹಾಕುವ ಸೂಚನೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರವು ಜಾತಿ–ಧರ್ಮದ ರಾಜಕೀಯ ಮಾಡಲು ಹೋಗಿ ಜನರಿಂದ ತಿರಸ್ಕೃತವಾಯಿತು. ಓಲೈಕೆ ರಾಜಕಾರಣದಿಂದ ಯಾವುದೇ ಪಕ್ಷ ಏಳಿಗೆ ಆಗುವುದಿಲ್ಲ ಎಂಬುದನ್ನು ಜಮೀರ್ ಅರಿಯಬೇಕು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಕಾರಣಕ್ಕಾಗಿ ಕಾಂಗ್ರೆಸ್‌– ಜೆಡಿಎಸ್‌ ಒಂದಾಗಿ ಸರ್ಕಾರ ರಚಿಸಿವೆ. ಮುಂದಿನ ಲೊಕಸಭಾ ಚುನಾವಣೆಯ ವೇಳೆಗೆ ರಾಜಕೀಯ ಪಕ್ಷಗಳ ನವರಂಗಿ ಆಟಗಳು ಯಾವ್ಯಾವ ರೂಪ ಪಡೆಯುವವು ಎಂದು ಊಹಿಸಲಾಗದು. ಇರುವಷ್ಟು ಕಾಲ ಭ್ರಷ್ಟಾಚಾರರಹಿತವಾದ ಉತ್ತಮ ಆಡಳಿತವನ್ನು ನೀಡುವ ನಿಟ್ಟಿನಲ್ಲಿ ಸಚಿವರು ಮತ್ತು ಮುಖ್ಯಮಂತ್ರಿ ಗಮನ ಕೇಂದ್ರೀಕರಿಸುವುದು ಸೂಕ್ತ.

ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT