ಯುಜಿಸಿ ತಾಂತ್ರಿಕ ಅಂಶಗಳ ಮಾನದಂಡಗಳನ್ನು ದೂರವಿಡಬೇಕು

7

ಯುಜಿಸಿ ತಾಂತ್ರಿಕ ಅಂಶಗಳ ಮಾನದಂಡಗಳನ್ನು ದೂರವಿಡಬೇಕು

Published:
Updated:

ವಿಶ್ವವಿದ್ಯಾಲಯ ಅನುದಾನ ಆಯೋಗವು ಕೆಲವು ಕನ್ನಡ ಜರ್ನಲ್‌ಗಳ ಮಾನ್ಯತೆಯನ್ನು ರದ್ದು ಮಾಡಿರುವ ಬಗ್ಗೆ ‘ಪದ್ಧತಿ ಬದಲಾಗಬೇಕು’ (ವಾ.ವಾ., ಆ. 7) ಎಂಬ ಪತ್ರದಲ್ಲಿ ಬರಗೂರು ರಾಮಚಂದ್ರಪ್ಪ ಮಂಡಿಸಿರುವ ಅಭಿಪ್ರಾಯಗಳು ಸೂಕ್ತವಾದವು. ಮಾನ್ಯತೆ ಪಡೆದ ಜರ್ನಲ್‌ನಲ್ಲಿ ತಮ್ಮ ಪ್ರಬಂಧ ‘ಪ್ರಕಟವಾಗುವಂತೆ ಮಾಡುವುದು’ ಹಾಗೂ ಪುಸ್ತಕಗಳಿಗೆ ಐಎಸ್‍ಬಿಎನ್ ಕೋಡ್ ಪಡೆಯುವ ಮೂಲಕ ತಮ್ಮ ಶೈಕ್ಷಣಿಕ ಸಾಧನೆಯ ಮಾನದಂಡವನ್ನು (ಎಪಿಐ) ವೃದ್ಧಿಸಿಕೊಳ್ಳುವುದೇ ಇತ್ತೀಚೆಗೆ ಪ್ರಾಧ್ಯಾಪಕರ ಆದ್ಯತೆಯಾಗುತ್ತಿದೆ.ವೆಬ್‌ಸೈಟ್‌ ಇಲ್ಲ ಎಂಬ ಕಾರಣ ನೀಡಿ ಹೆಚ್ಚಿನ ಜರ್ನಲ್‌ಗಳ ಮಾನ್ಯತೆಯನ್ನು ಯುಜಿಸಿ ರದ್ದು ಮಾಡಿದೆ. ಇವರೆಲ್ಲರೂ  ಈ ಕೂಡಲೇ ವೆಬ್‍ಸೈಟ್‌ಗಳನ್ನು ರೂಪಿಸಿಕೊಂಡರೆ ಅವು ಪುನಃ ಶ್ರೇಷ್ಠ ಜರ್ನಲ್‍ಗಳಾಗುತ್ತವೆಯೇ? ಸಾಧ್ಯವಿಲ್ಲ. ‘ಲಾಭಕ್ಕಾಗಿ’ ಲೇಖನ ಪ್ರಕಟಿಸುವಂಥ ಜರ್ನಲ್‍ಗಳನ್ನು ಮಾನ್ಯ ಮಾಡುವ ಬದಲು ಗುಣಮಟ್ಟದ ಲೇಖನಗಳ ಮೇಲೆ ಜರ್ನಲ್‌ಗಳ ಮೌಲಿಕತೆಯನ್ನು ಗುರುತಿಸುವ ವ್ಯವಸ್ಥೆಯನ್ನು ಯುಜಿಸಿ ರೂಪಿಸಬೇಕು. ಐಎಸ್‍ಬಿಎನ್ ಕೋಡ್ ವಿಚಾರವೂ ಬೇರೆಯಲ್ಲ. ಇಂತಹ ಕೋಡ್ ಕೊಡುವುದೇ ಇತ್ತೀಚೆಗೆ ಒಂದು ದೊಡ್ಡ ಕೆಲಸವಾಗಿದೆ. ಕೊಡುವವರು ಶ್ರೀಮಂತರಾಗಿದ್ದಾರೆ. ಆದ್ದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು ತಾಂತ್ರಿಕ ಅಂಶಗಳ ಮಾನದಂಡಗಳನ್ನು ದೂರವಿಟ್ಟು, ಪತ್ರಿಕೆ ಮತ್ತು ಪುಸ್ತಕಗಳ ಗುಣಮಟ್ಟ ಹೆಚ್ಚಾಗುವಂತೆ ಮಾಡುವುದರತ್ತ ಗಮನ ಹರಿಸಬೇಕು.
– ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !