ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶವನ್ನೂ ವಿಭಜಿಸಿ

Last Updated 8 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಭಯೋತ್ಪಾದಕರ ಬಲೆಗೆ ಬೀಳುತ್ತಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಸಲು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಉತ್ತರಪ್ರದೇಶದಲ್ಲಿಯೂ ನಿರುದ್ಯೋಗ ಮತ್ತು ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದೆ. ಮೇಲಾಗಿ ಕಾಶ್ಮೀರದಒಟ್ಟು ಜನಸಂಖ್ಯೆ ಕೇವಲ ಒಂದೂ ಕಾಲು ಕೋಟಿ ಇದ್ದರೆ, ಉತ್ತರ ಪ್ರದೇಶದ ಜನಸಂಖ್ಯೆ ಇದಕ್ಕಿಂತ19 ಪಟ್ಟು ಹೆಚ್ಚು, ಅಂದರೆ 24 ಕೋಟಿ. ಜಗತ್ತಿನ ಆರನೆಯ ಅತಿ ದೊಡ್ಡ ರಾಷ್ಟ್ರವಾದ ಬ್ರೆಜಿಲ್‌ನ ಜನಸಂಖ್ಯೆಕೇವಲ 20 ಕೋಟಿ ಇದೆ ಹಾಗೂ ಆ ದೇಶವು ಭೌಗೋಳಿಕ ವಿಸ್ತಾರದಲ್ಲಿ ಉತ್ತರಪ್ರದೇಶಕ್ಕಿಂತ 30 ಪಟ್ಟು ಹೆಚ್ಚು ದೊಡ್ಡದಿದೆ. ಹಾಗಾಗಿ, ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಹೇಳಿರುವಂತೆ, ಉತ್ತರಪ್ರದೇಶರಾಜ್ಯವನ್ನು 10 ಭಾಗಗಳನ್ನಾಗಿ ವಿಭಜಿಸದಿದ್ದರೂ ನಾಲ್ಕು ಭಾಗಗಳನ್ನಾದರೂ ಮಾಡಿ ಹೊಸ ರಾಜ್ಯಗಳನ್ನು ರಚಿಸಬಹುದು.

ಇದೇನೂ ಹೊಸ ಪ್ರಸ್ತಾವವಲ್ಲ. ಮಾಯಾವತಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯವನ್ನು ವಿಭಜಿಸಿ ನಾಲ್ಕು ಪ್ರತ್ಯೇಕ ರಾಜ್ಯಗಳನ್ನು ರೂಪಿಸುವ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ನೇತೃತ್ವದ ಸರ್ಕಾರ ಈ ಪ್ರಸ್ತಾವವನ್ನು ಕೈಬಿಟ್ಟು, ಆಂಧ್ರ ಪ್ರದೇಶವನ್ನು ವಿಭಜಿಸಿ
ಕೈಸುಟ್ಟುಕೊಂಡಿತು. ಈಗಲಾದರೂ ಉತ್ತರಪ್ರದೇಶವನ್ನು ವಿಭಜಿಸಿದರೆ, ಅಲ್ಲಿಯ ಅಭಿವೃದ್ಧಿಯ ವೇಗ ಹೆಚ್ಚಿ, ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗ ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆ ನಿಯಂತ್ರಣಕ್ಕೆ ಬರಬಹುದು.

ಕೆ.ಲಕ್ಷ್ಮೀಕಾಂತ್ ರಾವ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT