‘ಬೆಂಗಳೂರು ಸಾಹಿತ್ಯ ಹಬ್ಬ’ದಿಂದ ಹೊರಬರಲು ನಿರ್ಧರಿಸಿದ ವಿಕ್ರಂ ಸಂಪತ್ ಅವರಿಗೆ ಸಂಬಂಧಿಸಿದ ಸುದ್ದಿಯ ಶೀರ್ಷಿಕೆಯಲ್ಲಿ ‘ಸಹಿಷ್ಣುತೆ ಮಾಫಿಯಾ’ ಎಂಬ ಪದ ಬಳಸಲಾಗಿದೆ (ಪ್ರ.ವಾ., ನ. 29). ಅದನ್ನು ವಿಕ್ರಂ ಸಂಪತ್ ಅವರೇ ಹೇಳಿದ್ದರೂ ಅದು ಅನುಚಿತವಾದದ್ದು ಎಂದು ಪತ್ರಿಕೆ ಗ್ರಹಿಸದಿದ್ದುದು ದುರದೃಷ್ಟಕರ.

ಶೀರ್ಷಿಕೆಯು ಪಂಚ್‌ಲೈನ್ ಹೊಂದಿದ್ದರೆ ಹೆಚ್ಚು ಜನ ಓದುತ್ತಾರೆ ಎಂಬ ಉದ್ದೇಶ ಪತ್ರಿಕೆಯದ್ದಾಗಿರಬಹುದು. ಆದರೆ ಸಹಿಷ್ಣುತೆ ಒಂದು ಸಕಾರಾತ್ಮಕವಾದ ಪದ. ಅದನ್ನು ನಕಾರಾತ್ಮಕವಾಗಿ ಮಾಫಿಯಾ ಎಂಬ ಪದದೊಂದಿಗೆ ಬಳಸುವುದು ತಪ್ಪು. ಹೀಗಾದರೆ ಬುದ್ಧ, ಮಹಾವೀರ, ಯೇಸುಕ್ರಿಸ್ತ, ಬಸವಣ್ಣ ಮತ್ತು ಅನೇಕಾನೇಕ ಸಂತರೂ ಈ ಮಾಫಿಯಾದ ಡಾನ್‌ಗಳೇ ಆಗುತ್ತಾರೆ!

ಯೇಸು ಶಿಲುಬೆಯೇರಿದಾಗಲೂ ‘ತಂದೆಯೇ ಇವರನ್ನು ಕ್ಷಮಿಸು. ಇವರಿಗೆ ತಾವೇನು ಮಾಡುತ್ತಿದ್ದೇವೆಂದು ಗೊತ್ತಿಲ್ಲ’ ಎಂದನಂತೆ. ಅದು ಸಹಿಷ್ಣುತೆ. ಯಾವುದೇ ಪದಕ್ಕೆ ವಾಚ್ಯ ಇಲ್ಲವೇ ಅವಾಚ್ಯ ಎಂಬ ಅಂಶವಿರುತ್ತದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.