ಪ್ರಧಾನಿ ನರೇಂದ್ರ ಮೋದಿ, ನಕ್ಸಲ್‌ಪೀಡಿತ ಛತ್ತೀಸ್‌ಗಡದ ದಾಂತೇವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಮಾವೊವಾದಿಗಳು ಕೆಲವರನ್ನು ಒತ್ತೆಯಾಗಿ ಇಟ್ಟುಕೊಂಡಿದ್ದನ್ನು ವಿದ್ಯುನ್ಮಾನ ಮಾಧ್ಯಮಗಳು ಮನಸೋ ಇಚ್ಛೆ ವರದಿ ಮಾಡಿ, ವೀಕ್ಷಕರನ್ನು ಗೊಂದಲಕ್ಕೆ ಸಿಲುಕಿಸಿದವು. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಸಲುವಾಗಿ ಮತ್ತು ತಾವೇ ಮೊದಲು ಸುದ್ದಿಯನ್ನು ಬ್ರೇಕ್ ಮಾಡಬೇಕು ಎನ್ನುವ ಆತುರದಲ್ಲಿ, ಪ್ರಾಥಮಿಕ ಸುದ್ದಿ ಬಂದಾಗ ತಮಗೆ ತಿಳಿದ ಅಂಕಿ-ಅಂಶಗಳನ್ನು ಆ ಕ್ಷಣಕ್ಕೆ ಕೊಟ್ಟವು.

ಆದರೆ ಕೆಲ ಸಮಯ ಕಳೆದಂತೆ ನಿಖರವಾದ ಅಂಕಿ-ಅಂಶವನ್ನು ಒದಗಿಸುವ ಗೋಜಿಗೇ ಹೋಗಲಿಲ್ಲ. ಹೀಗಾಗಿ ಆ ದಿನದ ರಾತ್ರಿವರೆಗೂ ಬೆಳಿಗ್ಗೆ ಸಿಕ್ಕ ಪ್ರಾಥಮಿಕ ಮಾಹಿತಿಯೇ ಬಿತ್ತರವಾಗುತ್ತಿತ್ತು. ಪ್ರತಿ ವಾಹಿನಿಯಲ್ಲೂ ಒಂದೊಂದು ಬಗೆಯ ಅಂಕಿ-ಅಂಶಗಳು. ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಯಲು ಜನ ಮಾರನೇ ದಿನದ ಪತ್ರಿಕೆಗಳನ್ನು ನೋಡಬೇಕಾಯಿತು.

ಕ್ಷಣಕ್ಷಣದ ಸುದ್ದಿಗಾಗಿ, ನಿಖರತೆಗಾಗಿ ನಮ್ಮ ಚಾನೆಲ್ ನೋಡಿ ಎಂದು ಹೇಳಿಕೊಳ್ಳುವ ವಿದ್ಯುನ್ಮಾನ ಮಾಧ್ಯಮ ಗಳು ಮೊದಲು ಸರಿಯಾದ ಸುದ್ದಿ ಮತ್ತು ನಿಖರ ಅಂಕಿ-ಅಂಶ ಕೊಡುವ ಕಡೆ ಗಮನಹರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.