ರಾಜ್ಯದಲ್ಲಿ ಐಟಿಐ ವೃತ್ತಿತರಬೇತಿ ಕೋರ್ಸ್ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ 23 ಸಾವಿರ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಸೈಕಲ್ ವಿತರಿಸಲು ನಿರ್ಧರಿಸಿರುವುದು ಸಂತಸದ ವಿಷಯ. ಆದರೆ ಅವು ಉತ್ತಮ ಗುಣಮಟ್ಟದ ಸೈಕಲ್ಗಳಾಗಿರಲಿ.
ಸದ್ಯ ವೃತ್ತಿಪರ ವಸತಿ ನಿಲಯಗಳಲ್ಲಿ ಹಂಚಿಹೋಗಿರುವ ಈ ವಿದ್ಯಾರ್ಥಿಗಳಿಗೆ ಕಾಲೇಜುಗಳ ಹತ್ತಿರದಲ್ಲೇ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಬೇಕು.
ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾದಂತಹ ಯೋಜನೆಗಳು ಯಶಸ್ವಿಯಾಗಬೇಕಾದರೆ ಎಂಜಿನಿಯರಿಂಗ್ ಕಾಲೇಜುಗಳ ಮಾದರಿಯಲ್ಲಿ ಐಟಿಐ ಕಾಲೇಜುಗಳು ಅಭಿವೃದ್ಧಿಯಾಗಬೇಕು. ಏಕೆಂದರೆ ಏನನ್ನೇ ತಯಾರಿಸಬೇಕಿದ್ದರೂ, ಕೌಶಲದ ಅಗತ್ಯವಿದ್ದರೂ ಮೊದಲು ಬೇಕಾಗುವವರು ಇವರೆ.