ಬೆಂಗಳೂರು ಜಲಮಂಡಳಿ ಕೊಳವೆಬಾವಿ ಇರುವವರು ಈ ತಿಂಗಳ ಕೊನೆಯ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ಆದರೆ ಈ ನೋಂದಣಿ ವಿಷಯ ಇನ್ನೂ ಬಹಳ ಮನೆ ಮಾಲೀಕರಿಗೆ ತಿಳಿದಂತಿಲ್ಲ. ಕೊಳವೆಬಾವಿ ಹೊಂದಿರುವವರು ಈಗಾಗಲೇ ಪ್ರತಿ ತಿಂಗಳು ರೂ 50 ಶುಲ್ಕ ಕಟ್ಟುತ್ತಿದ್ದಾರೆ.
ಹಾಗಾಗಿಕೊಳವೆಬಾವಿ ಹೊಂದಿರುವವರ ಬಗ್ಗೆ ಇಲಾಖೆಗೆ ಮಾಹಿತಿ ಇರಲೇಬೇಕು. ಈ ಮಾಹಿತಿಯಂತೆ ಜಲಮಂಡಳಿಯು ಮೀಟರ್ ರೀಡರ್ಗಳ ಮೂಲಕ ನೋಂದಣಿ ನಮೂನೆ ತಲುಪಿಸಿ, ಅವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಮೀಟರ್ ರೀಡರುಗಳು ನೀಡಿ ಈ ಕಾರ್ಯ ಅತಿ ಸುಲಭ, ಸರಳವಾಗಿ ಮುಗಿಸಬಹುದು. ಮೀಟರ್ ರೀಡರುಗಳಿಗೆ ಅವರ ಕೆಲಸದ ಜೊತೆಗೆ ಈ ಕೆಲಸ ಮಾಡಲು ಅವರಿಗೆ ಇಂತಿಷ್ಟು ಎಂದು ಪ್ರೋತ್ಸಾಹ ಧನ ನೀಡಿದರೆ, ಅವರು ಖಂಡಿತಾ ಈ ಕೆಲಸ ಬಹಳ ಚೆನ್ನಾಗಿ ಮಾಡಿ ಯಶಸ್ಸು ಲಭಿಸುವಂತೆ ಮಾಡುತ್ತಾರೆ. ಈ ನೋಂದಣಿ ಅರ್ಜಿ ಸರಳ ಕನ್ನಡದಲ್ಲಿ ಸುಲಭವಾಗಿ ಎಲ್ಲಾ ವಿವರ ಸಲ್ಲಿಸುವಂತಿರಬೇಕು.