ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿ

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮೇಲಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಿರುಕುಳ ಮತ್ತು ದಬ್ಬಾಳಿಕೆ ತಾಳಲಾರದೆ ಬೀದರ್ ಜಿಲ್ಲೆಯ ಬ್ಯಾಲಹಳ್ಳಿ ಪಿಡಿಓ ವಿಜಯಕುಮಾರ್ ಸೂರ್ಯವಂಶಿ ಆತ್ಮಹತ್ಯೆ ಮಾಡಿಕೊಂಡಾಗ (2011 ರಲ್ಲಿ) ಅವರ ಮನೆಗೆ ಆಗಿನ ಪಂಚಾಯತ್‌ರಾಜ್ ಸಚಿವ ಹಾಗೂ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೇಟಿ ನೀಡಿ ಆಶ್ವಾಸನೆಗಳನ್ನು ಕೊಟ್ಟು ಸಾಂತ್ವನ ಹೇಳಿ ಬಂದಿದ್ದರು. ಆದರೆ ಸರ್ಕಾರ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಬೇಸತ್ತು ಪಿಡಿಓ ವಿಜಯಕುಮಾರ್ ಅವರ ತಂದೆ ಉಪನ್ಯಾಸಕ ಮಾಣಿಕರಾವ ಸೂರ್ಯವಂಶಿ ಅವರು ಮೊನ್ನೆ ತಾನೆ ಆತ್ಮಹತ್ಯೆ ಮಾಡಿಕೊಂಡದ್ದು ದುರದೃಷ್ಟಕರ ಸಂಗತಿ.

2012ರಲ್ಲಿ ಭ್ರಷ್ಟಾಚಾರ ಕಂಡು ಬೇಸತ್ತ ಮೈಸೂರು ವಿ.ವಿ. ಸಮಾಜಶಾಸ್ತ್ರ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೂ ಬೀದರ್‌ನ ಈ ಎರಡು ಘಟನೆಗಳಿಗೂ ಸಾಮ್ಯತೆ ಕಂಡುಬರುತ್ತದೆ.  ಬಲಿಷ್ಠ ಸಮಾಜ ಕಟ್ಟುವ ಜವಾಬ್ದಾರಿ ಹೊತ್ತಎರಡು ಹಿರಿಯ ಜೀವಗಳು ಈಗಿನ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಕಂಡು ಕೊರಗಿದ್ದಾರೆ. ಬೇಸತ್ತಿದ್ದಾರೆ. ಇದು ನಮ್ಮ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿಯಷ್ಟೆ.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT