ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೆಸ್ನಾನವೂ ವೈಜ್ಞಾನಿಕವೇ?

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಡೆ ಮಡೆ ಸ್ನಾನ ಕುರಿತಾಗಿ ಪ್ರಕಾಶ್ ಹೆಗಡೆ ಅವರ ‘ರಾಸಾಯನಿಕ ಕ್ರಿಯೆಯಿಂದ ಪರಿಣಾಮ’  (ವಾ.ವಾ., ನ. ೨೮) ಪತ್ರ  ಅವೈಜ್ಞಾನಿಕ ವಿಚಾರ­ಗಳಿಂದ ತುಂಬಿದೆ. ಹೆಗಡೆ ಅವರು ಹೇಳಿ­ದಂತೆ ಬರಿ ಎಂಜಲೆಲೆಯ ಮೇಲೆ ಹೊರಳಾಡುವವರಿಗೆ ಮಾತ್ರ ಅಸಹ್ಯವೆನ್ನಿ­ಸು­ವುದಿಲ್ಲ, ಆ ವಿಕಾರವನ್ನು ನೋಡುವ ಯಾರಿಗೆ ಆದರೂ ಅಸಹ್ಯವೆನ್ನಿಸುತ್ತದೆ. ಈ ಅಸಹ್ಯ ಸಂವೇದನೆ­ಯಿಂದ ಮಿದುಳು ಒಂದು ರೀತಿಯ ಹಾರ್ಮೋನ್ ಉತ್ಪತ್ತಿ ಮಾಡಿ ಆ ರಾಸಾಯನಿಕವೇ ಚರ್ಮವ್ಯಾಧಿ ಗುಣಪಡಿಸುತ್ತದೆಯೆಂಬುದು ಅವರ ಅಪ್ಪಟ ಊಹೆ ಮಾತ್ರ.

ವಿಜ್ಞಾನ ಎಂದರೆ ಊಹೆಯಲ್ಲ, ಪ್ರಯೋಗ­ಗಳಿಂದ ಋಜುವಾತು ಆದಂಥ  ವ್ಯವಸ್ಥಿತ ಜ್ಞಾನ. ಅಷ್ಟಕ್ಕೂ ಧಾರ್ಮಿಕತೆಯೇ ಬೇರೆ, ವೈಜ್ಞಾನಿಕತೆಯೇ ಬೇರೆ. ಧರ್ಮದಲ್ಲಿ ವಿಜ್ಞಾನವನ್ನೂ, ವಿಜ್ಞಾನದಲ್ಲಿ ಧರ್ಮವನ್ನೂ ಹುಡುಕಲು ಇದೇನು ಕಣ್ಣಾ­ಮುಚ್ಚಾಲೆ ಆಟವಲ್ಲ. ಆದಾಗ್ಯೂ ಹೆಗಡೆಯವರಿಗೆ ನನ್ನ ಪ್ರಶ್ನೆ: ಎಂಜಲೆಲೆಯ ಮೇಲೆ ಹೊರಳಾಡು­ವಾಗ ಯಾವ ಹಾರ್ಮೋನ್ ಉತ್ಪತ್ತಿಯಾಗು­ತ್ತದೆ? ಈ ನಿಟ್ಟಿನಲ್ಲಿ ಯಾರು ಯಾವ ಸಂಶೋಧನೆ ಕೈಗೊಂಡಿದ್ದಾರೆ? ಇಷ್ಟು ಸಲೀಸಾಗಿ ಚರ್ಮರೋಗ­ಗಳು ಗುಣಮುಖವಾಗತೊಡಗಿದ್ದರೆ, ಬಹಳಷ್ಟು  ಹಣ ವೆಚ್ಚ ಮಾಡಿ ಚರ್ಮ ವೈದ್ಯರ ಬಳಿ ಆದರೂ ಯಾಕೆ ಹೋಗಬೇಕು? ಉತ್ತರಿಸಿ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT