ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ವಿವಾಹ

ಅಕ್ಷರ ಗಾತ್ರ

ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ವೈವಾಹಿಕ ಬದುಕಿಗೆ ಪದಾರ್ಪಣೆ ಮಾಡಿದ 127 ಜೋಡಿಗಳಲ್ಲಿ, 22 ಜೋಡಿ ಪರಿಶಿಷ್ಟ ಜಾತಿಯವರು ಮತ್ತು 19 ಜೋಡಿ ಅಂತರ್ಜಾತೀಯ ವಿವಾಹವಾಗಿರುವುದು ಅಪೂರ್ವ ಬೆಳವಣಿಗೆ (ಪ್ರ.ವಾ., ಏ. 30). ಬಹುಸಂಖ್ಯಾತ ವರ್ಗ ಅಪಾರ ಶ್ರದ್ಧೆ ಇಟ್ಟುಕೊಂಡಿರುವ ಧರ್ಮಸ್ಥಳ ಕ್ಷೇತ್ರದಲ್ಲಿ ಇಂಥ ಸರಳ ಸಾಮೂಹಿಕ ವಿವಾಹಗಳು ನಡೆಯುವುದರಿಂದ ಸಮಯ ಉಳಿಯುತ್ತದೆ, ದುಂದುವೆಚ್ಚ ಮತ್ತು ಪರಿಸರ ಮಾಲಿನ್ಯ ತಪ್ಪುತ್ತದೆ.

ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲೂ ಈ ರೀತಿಯ ವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದರೆ ಆಡಂಬರ, ವೈಭವದ ವಿವಾಹದೆಡೆಗಿನ ವ್ಯಾಮೋಹ ಕಡಿಮೆಯಾಗಿ ಸರಳ ವಿವಾಹಗಳೆಡೆಗೆ ಒಲವು ಮೂಡುತ್ತದೆ.

ಅಂತರ್ಜಾತೀಯ- ಧರ್ಮೀಯ ವಿವಾಹಗಳಿಂದ ಜಾತಿ ಪದ್ಧತಿ ನಶಿಸಿ ಜಾತ್ಯತೀತ, ಧರ್ಮಾತೀತ ಸಮಾಜ ನಮ್ಮದಾಗಿ, ಸಂವಿಧಾನದ ಉದ್ದೇಶ ಈಡೇರಿದಂತಾಗುತ್ತದೆ. ಸರ್ಕಾರ ಇಂತಹ ವಿವಾಹಗಳಿಗೆ ಹಣಕಾಸಿನ ನೆರವು ನೀಡಿ ಪ್ರೋತ್ಸಾಹಿಸುವುದರ ಜೊತೆಗೆ, ನವದಂಪತಿಗಳಿಗೆ ಸೂಕ್ತ ರಕ್ಷಣೆ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT