ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು, ಸಂಭ್ರಮ ಮತ್ತು ವಿಕೃತಿ

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹಿರಿಯ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರ ಸಾವು ತೀರಾ ಅನೀರಿಕ್ಷಿತವಲ್ಲವಾದರೂ ಅತೀವ ನೋವು ತಂದ ಸಂಗತಿ.

ಕರ್ನಾಟಕ ಒಳ­ಗೊಂಡಂತೆ ಇಡೀ ಭಾರತದ ಪ್ರಜ್ಞಾವಂತ ಬೌದ್ಧಿಕ ಲೋಕ ಸಂತಾಪ ಸೂಚಿಸು­ತ್ತಿರುವ ಹೊತ್ತಲ್ಲಿ ಕೆಲವು ಹಿಂದೂಪರ ಸಂಘಟನೆಗಳು ಅನಂತಮೂರ್ತಿ ಸಾವನ್ನು ಸಂಭ್ರ­ಮಿ­ಸುತ್ತಿ­ರು­ವುದು ಹೇಸಿಗೆ ತರುವ ಸಂಗತಿ. ದೃಶ್ಯ­ಮಾಧ್ಯಮ­ಗಳಲ್ಲಿ ಒಂದೆಡೆ ನಾಡಿನ ಅಪ­ರೂ­ಪದ ಚಿಂತಕನ ಪಾರ್ಥಿವ ಶರೀರ ತರುವ ದೃಶ್ಯ ಪ್ರಸಾರ­ವಾಗುತ್ತಿದ್ದರೆ ಇನ್ನೊಂದೆಡೆ ಬಜ­ರಂಗ­­ದಳ ಮುಂತಾದ ಹಿಂದೂಪರ ಸಂಘಟನೆ­ಗಳು ಪಟಾಕಿ ಸಿಡಿಸಿ ಆನಂದ ಪಡುತ್ತಿರುವ ದೃಶ್ಯ  ಪ್ರಸಾರ­ವಾಗು­ತ್ತಿತ್ತು.  ಇದು ಅತ್ಯಂತ ಹೇಯ ಘಟನೆ. ದಂತಚೋರ ವೀರಪ್ಪನ್ ಹತನಾದಾ­ಗಲೂ ಯಾರೂ ಹೀಗೆ ಸಾವನ್ನು ಅಪಮಾನಿಸಿ­ರ­ಲಿಲ್ಲ. ಅದೆಷ್ಟೋ ದೇಶದ್ರೋಹಿಗಳನ್ನು ಶೂಲಕ್ಕೇ­ರಿ­ಸಿ­­ದಾಗಲೂ ಜನತೆ ನಿರುಮ್ಮಳ ಉಸಿರು ಬಿಟ್ಟಿರ­ಬಹುದೆ ಹೊರತು ಸಾವನ್ನು ಸಂಭ್ರಮಿಸಿರಲಿಲ್ಲ. 

ಸಂಸ್ಕೃತಿ, ಧರ್ಮ, ದೇವರ ಬಗ್ಗೆ ಭಾವುಕ­ವಾಗಿ ಮಾತನಾಡುವ ಹಿಂದೂ ಸಂಘಟ­ನೆ­ಗಳು ವ್ಯಕ್ತಿ­ಯೊ­ಬ್ಬರ ಸಾವಿನ ಸನ್ನಿಧಿಯಲ್ಲಿ ಮಾಡಿ­ದ್ದೇನು? ವಿವಿಧ ವೈಚಾರಿಕ ಗುಂಪುಗಳು ನಡುವೆ ಪರಸ್ಪರ ಸೈದ್ಧಾಂತಿಕ ಭಿನ್ನತೆಗಳಿರಬಹುದು. ಅಭಿಪ್ರಾಯ ಭೇದಗಳಿರಬಹುದು. ಆದರೆ, ಕನಿಷ್ಠಮಟ್ಟದ ಮಾನವೀಯತೆ ಇಲ್ಲ­­­ವಾ­­ದರೆ ಆ ದೇಶಕ್ಕೆ ಬಹು­ದೊಡ್ಡ ಗಂಡಾತರ ಕಾದಿದೆ ಎಂದರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT