ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ತೀರ್ಪು ಸ್ವಾಗತಾರ್ಹ

Last Updated 19 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿ­ಯಾಗಿದ್ದ ಶಾಂತನ್, ಪೇರರಿ­ವಾಳನ್, ಮುರುಗನ್ ಅವರ ಮರಣ ದಂಡನೆಯನ್ನು ಜೀವಾ­ವಧಿ ಶಿಕ್ಷೆಯಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ­ರುವುದು ಸ್ವಾಗ­ತಾರ್ಹ.

ಈಗಾ­ಗಲೇ ೨೨ ವರ್ಷ­ಗಳ ಕಾರಾ­ಗೃಹ ಶಿಕ್ಷೆ­ಯನ್ನು ಅನುಭವಿಸಿರುವ ಇವರು ಮರಣ­ದಂಡನೆಗಿಂತ ಹೆಚ್ಚು ಶಿಕ್ಷೆಯನ್ನು ಅನುಭವಿಸಿದ್ದಾರೆ. ಈ ಮೂವರು ಕಾರಾಗೃಹದಲ್ಲಿದ್ದು ಕೊಂಡೇ ಅಂಚೆ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ­ವನ್ನು ಪಡೆದಿರುವುದಲ್ಲದೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ­ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಕೈದಿ­ಗಳಿಗೆ ಮಾರ್ಗ ದರ್ಶಕರಾಗಿ­ದ್ದಾರೆ. ಅದ­ರಲ್ಲೂ ಶಾಂತನ್ ಒಬ್ಬ ಒಳ್ಳೆಯ ಕಥೆ­ಗಾರ. ಆತನ 40ಕ್ಕೂ ಹೆಚ್ಚು ಕಥೆಗಳನ್ನು  ನಾನು ಅನುವಾದಿಸಿದ್ದು ‘ಪ್ರಜಾವಾಣಿ’ ಸಾಪ್ತಾಹಿಕ ಪುರವಣಿ ಸೇರಿದಂತೆ ಅನೇಕ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಅಲ್ಲದೆ, ಈ ಕಥೆಗಳೆಲ್ಲವೂ ‘ರೆಕ್ಕೆಗಳಿಲ್ಲದ ಹಕ್ಕಿಗಳು’ ಎಂಬ ಶಿರೋ ನಾಮೆಯಲ್ಲಿ ಪುಸ್ತಕ ರೂಪದಲ್ಲೂ ಪ್ರಕಟವಾಗಿವೆ. ಮರಣ ದಂಡನೆಗೆ ಗುರಿಯಾದ ವ್ಯಕ್ತಿಯೊಳಗಿನ ಮಾನವೀಯ ಅಂತಃಕರಣವನ್ನು ಈ ಕಥೆಗಳಲ್ಲಿ ಕಾಣಬಹುದು.

ಕಾರಾಗೃಹಗಳು ಅಪರಾಧಿಗಳ ಮನಃಪರಿವರ್ತನಾ ತಾಣಗಳಾಗಬೇಕೆ ಹೊರತು ವಧಾ ತಾಣಗಳಾಗಬಾರದು. ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದ ಪೀಠದ ಈ ತೀರ್ಪು ನಮ್ಮ ದೇಶದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT