ಭಾರತದ ಒಂದು ‘ನಿರ್ದಿಷ್ಟ ದಾಳಿ’ಗೆ ಪ್ರತಿಯಾಗಿ ಹತ್ತು ದಾಳಿ: ಪಾಕಿಸ್ತಾನ ಎಚ್ಚರಿಕೆ

7
ಲಂಡನ್‌ನಲ್ಲಿ ಪಾಕ್ ಸೇನಾ ವಕ್ತಾರರ ಹೇಳಿಕೆ

ಭಾರತದ ಒಂದು ‘ನಿರ್ದಿಷ್ಟ ದಾಳಿ’ಗೆ ಪ್ರತಿಯಾಗಿ ಹತ್ತು ದಾಳಿ: ಪಾಕಿಸ್ತಾನ ಎಚ್ಚರಿಕೆ

Published:
Updated:

ಇಸ್ಲಾಮಾಬಾದ್: ನಮ್ಮ ಭೂಭಾಗದಲ್ಲಿ ಭಾರತ ಒಂದು ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿದರೆ ಅದಕ್ಕೆ ಪ್ರತೀಕಾರವಾಗಿ 10 ನಿರ್ದಿಷ್ಟ ದಾಳಿ ನಡೆಸುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.

ಈ ಕುರಿತು ಪಾಕಿಸ್ತಾನ ಸೇನೆಯ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್‌ ವಕ್ತಾರ ಜನರಲ್ ಆಸಿಫ್ ಗಫೂರ್ ಅವರು ಲಂಡನ್‌ನಲ್ಲಿ ಶನಿವಾರ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ‘ರೇಡಿಯೊ ಪಾಕಿಸ್ತಾನ್’ ವರದಿ ಮಾಡಿದೆ. ಹೇಳಿಕೆ ನೀಡುವ ವೇಳೆ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಜ್ವಾ ಸಹ ಅಲ್ಲಿ ಹಾಜರಿದ್ದರು.

‘ನಮ್ಮ ವಿರುದ್ಧ ದುಸ್ಸಾಹಸಕ್ಕೆ ಕೈಹಾಕುವವರಿಗೆ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದೂ ಗಫೂರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂಬುದು ಸೇನೆಯ ಬಯಕೆಯಾಗಿದೆ. ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ದೇಶದ ಇತಿಹಾಸದಲ್ಲೇ ಅತ್ಯಂತ ಪಾರದರ್ಶಕವಾಗಿತ್ತು ಎಂದೂ ಅವರು ಹೇಳಿದ್ದಾರೆ. ಮಾಧ್ಯಮದ ಮೇಲೆ ನಿಯಂತ್ರಣ ಹೇರಲಾಗಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಅವರು, ದೇಶದಲ್ಲಿ ಸಂಪೂರ್ಣ ವಾಕ್ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !