ಹತ್ತು ಕೋಟಿ ವರ್ಷಗಳಲ್ಲಿ ಮಾಯವಾಗುತ್ತೆ ಶನಿಯ ಉಂಗುರ

7

ಹತ್ತು ಕೋಟಿ ವರ್ಷಗಳಲ್ಲಿ ಮಾಯವಾಗುತ್ತೆ ಶನಿಯ ಉಂಗುರ

Published:
Updated:
Deccan Herald

ವಾಷಿಂಗ್ಟನ್‌ : ಉಂಗುರಗಳ ಕಾರಣದಿಂದಲೇ ಬೇರೆಲ್ಲ ಗ್ರಹಗಳಿಗಿಂತ ಆಕರ್ಷಕವಾಗಿ ಕಾಣುವ ಶನಿಯು, ಈಗ ತನ್ನ ಈ ಅಂದವನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಅಂದರೆ, ಶನಿಯ ಉಂಗುರಗಳು ವೇಗವಾಗಿ ತೆಳುವಾಗುತ್ತಿದ್ದು, ಇದೇ ವೇಗದಲ್ಲಿ ಸಾಗಿದರೆ, ಮುಂದಿನ ಹತ್ತು ಕೋಟಿ ವರ್ಷಗಳಲ್ಲಿ ಇವು ಸಂಪೂರ್ಣವಾಗಿ ಮಾಯವಾಗಲಿವೆ ಎಂದು ನಾಸಾ ಹೇಳಿದೆ.

‘ಹಿಮಕಣಗಳಿಂದ ಕೂಡಿರುವ ಈ ಗ್ರಹವು, ತನ್ನ ಗುರುತ್ವ ಬಲದ ಪ್ರಭಾವಕ್ಕೆ ಒಳಗಾಗಿ ದೂಳಿನ ಮಳೆಯನ್ನು ಸುರಿಸುತ್ತಿದೆ. ಈ ಮಳೆಯ ನೀರು ಶನಿಯ ಉಂಗುರಗಳಲ್ಲಿ ಸಂಗ್ರಹವಾಗುತ್ತಿದೆ. ಅರ್ಧ ತಾಸಿನಲ್ಲಿ ಒಲಿಂಪಿಕ್‌ ಗಾತ್ರದ ಈಜುಕೊಳವನ್ನು ಭರ್ತಿ ಮಾಡುವಷ್ಟು ನೀರು ಇಲ್ಲಿ ಸೇರುತ್ತಿದೆ’ ನಾಸಾದ ಗೊಡ್ಡಾರ್ಡ್‌ ಬಾಹ್ಯಾಕಾಶ ಕೇಂದ್ರದ ಜೇಮ್ಸ್‌ ಡೊನೊ ಹೇಳುತ್ತಾರೆ.

ಶನಿ ಗ್ರಹವು ಉಂಗುರಗಳೊಂದಿಗೆಯೇ ರಚನೆಯಾಗಿದೆಯೇ ಅಥವಾ ಕಾಲಾನಂತರದಲ್ಲಿ ಈ ಉಂಗುರಗಳ ಅಂದವನ್ನು ಶನಿ ಪಡೆದುಕೊಂಡಿದೆಯೇ ಎಂಬ ಬಗ್ಗೆ ಉತ್ತರಿಸಿರುವ ವಿಜ್ಞಾನಿಗಳು, ಈ ಉಂಗುರಗಳ ಸದ್ಯ ಹತ್ತು ಕೋಟಿ ವರ್ಷ ವಯಸ್ಸಿನವುಗಳಾಗಿರುವುದರಿಂದ, ಕಾಲಾನಂತರದಲ್ಲಿಯೇ ಇವು ರಚನೆಗೊಂಡಿವೆ. ಏಕೆಂದರೆ, ಶನಿಯ ವಯಸ್ಸು ಸದ್ಯ 400 ಕೋಟಿ ವರ್ಷಗಳಾಗಿವೆ ಎಂದು ಅವರು ಹೇಳುತ್ತಾರೆ.

‘ಶನಿಯ ಜೀವಿತದ ನಡುವಯಸ್ಸಿನಲ್ಲಿ ಈ ಉಂಗುರಗಳು ಕಾಣಿಸಿಕೊಂಡಿವೆ. ಈ ಉಂಗುರಗಳು ದಪ್ಪ ಇರುವುದರಿಂದ ನಮಗೆ ಗೋಚರಿಸುತ್ತಿವೆ. ಸದ್ಯ, ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಅವು ತೆಳುವಾಗುತ್ತಾ ಹೋದರೆ ಕಣ್ಮರೆಯಾಗಲಿವೆ. ಗುರು, ಯುರೇನಸ್‌ ಮತ್ತು ನೆಪ್ಚೂನ್‌ನಲ್ಲಿಯೂ ಉಂಗುರಗಳು ಇದ್ದರೂ, ಅವು ತೀರಾ ತೆಳುವಾಗಿರುವುದರಿಂದ ಅವುಗಳ ಕಣ್ಮರೆ ಅಷ್ಟು ಗಮನ ಸೆಳೆಯಲಾರದು’ ಎಂದು ಜೇಮ್ಸ್‌ ಹೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !