ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಆರೋಗ್ಯ ಸ್ಥಿತಿ ಗಂಭೀರ

7

ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಆರೋಗ್ಯ ಸ್ಥಿತಿ ಗಂಭೀರ

Published:
Updated:

ಲಾಹೋರ್‌ (ಪಿಟಿಐ): ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಬುಧವಾರ ತಿಳಿಸಿದ್ದಾರೆ.

ಷರೀಫ್‌ ಅವರ ಆರೋಗ್ಯದಲ್ಲಿ ಮಂಗಳವಾರ ದಿಢೀರ್‌ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪಂಜಾಬ್‌ ಹೃದ್ರೋಗ ಸಂಸ್ಥೆಗೆ (ಪಿಐಸಿ) ದಾಖಲಿಸಲಾಗಿತ್ತು. ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ‘ಆರೋಗ್ಯ ಅಷ್ಟೇನು ಗಂಭೀರವಾಗಿ ಹದಗೆಟ್ಟಿಲ್ಲ’. ಹೃದಯ ಸಮಸ್ಯೆ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲು ನಿತ್ಯ ತಪಾಸಣೆ ಮತ್ತು ತೀವ್ರತೆರನಾದ ವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು. ಹಾಗಾಗಿ ಜೈಲು ಅಧಿಕಾರಿಗಳು ಷರೀಫ್‌ ಅವರನ್ನು ಮಂಗಳವಾರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ವಾಪಸ್‌ ಜೈಲಿಗೆ ಕರೆದೊಯ್ದಿದ್ದರು.

ಷರೀಫ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅವರ ವೈದ್ಯ ಅದ್ನಾನ್‌ ಖಾನ್‌ ‘ಹೃದಯ ಕಾಯಿಲೆಯಿಂದ ಷರೀಫ್‌ ಅವರ ಆರೋಗ್ಯ ತುಂಬಾ ಗಂಭೀರಗೊಂಡಿದೆ. ಹೃದಯ ಕಾಯಿಲೆಗೆ ಜೈಲಿನಲ್ಲಿ ಚಿಕಿತ್ಸಾ ಸೌಲಭ್ಯಗಳಿಲ್ಲ. ಹಾಗಾಗಿ ತಕ್ಷಣವೇ ಅವರನ್ನು ಯಾವುದೇ ವಿಳಂಬ ಮಾಡದೆ ಆಸ್ಪತ್ರೆಗೆ ಸ್ಥಳಾಂತರಿಸಬೇಕು’ ಎಂದು ಹೇಳಿದ್ದಾರೆ.

ಮೂರು ಬಾರಿ ದೇಶದ ಪ್ರಧಾನಿಯಾಗಿದ್ದ 69 ವರ್ಷದ ಷರೀಫ್‌ಗೆ ಅಲ್‌– ಅಜೀಜಿಯಾ ಸ್ಟೀಲ್‌ ಮಿಲ್ಸ್‌ ಪ್ರಕರಣದಲ್ಲಿ ಇಸ್ಲಾಮಾಬಾದ್‌ ಕೋರ್ಟ್‌ ಏಳು ವರ್ಷಗಳ ಶಿಕ್ಷೆ ವಿಧಿಸಿದೆ. ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಅವರನ್ನು ಅತಿ ಭದ್ರತೆಯಲ್ಲಿ ಇಡಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !