ಸೋಮವಾರ, ಜೂನ್ 21, 2021
30 °C

ಬರದ ಹಾಡು

ಆರ್‌.ಪಿ. ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ ಬೆಳೆ ಸುಟ್ಟು ಉರಿದ್ಹೋದವೋ

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ ಬೆಳೆ ಸುಟ್ಟು ಉರಿದ್ಹೋದವೋ

ಹೊಳೆ ಹಳ್ಳ ಬರಿದಾದೊ ಕೆರೆ ಕುಂಟೆ ತಳ ಕಂಡೊ

ನೆರಳಿಗೂ ಗತಿಯಿಲ್ಲವೋ... ಭೂಮ್ತಾಯಿ ಒಡಲೆಲ್ಲ ಹುಡಿಯಾದವೋ

ಜನರೆಲ್ಲ ತಳಮಳಿಸಿ ಕಂಗೆಟ್ಟವೋ

ಮಳಿಯಾಕ ಕೈಕೊಟ್ಟವೋ ಹೇ ಶಿವನೆ...

 

ಹಸಿರಿನ ಹೆಸರಿಲ್ಲ, ಮೇವು ನೀರುಗಳಿಲ್ಲ

ಹಸು– ಕರು ಹಣ್ಣಾದವೋ...  ಹಸಿವಿನಿಂದ ಅಸುನೀಗಿ ಮಣ್ಣಾದವೋ

ಹಣಕಾಗಿ ಕಟುಕರಿಗೆ ಬಲಿಯಾದವೋ

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ...

 

ಹಣವು ಕೈಯೊಳಗಿಲ್ಲ ಉಣಲು ಧಾನ್ಯಗಳಿಲ್ಲ

ರೈತರು ಬಡವಾದರೋ... ಸಾಲಕ್ಕೆ ಹೊಲ ಮನಿ ಅಡವಾದವೋ

ಗುಳೆಯೆದ್ದು ಹಳ್ಳಿಗಳು ಬರಿದಾದವೋ

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ...

 

ಉಳ್ಳವರ ಹರಕೆಯಲಿ, ಬರವೆಂಬ ಮಳೆಬಿದ್ದೊ

ಆಸೆಗಳು ಹಸಿಯಾದವೋ... ಧನಿಕರ ಕಣಜದಲಿ ಸಸಿಯಾದವೋ

ಹೊಡೆಯೊಡೆದು ಝಣಝಣ ಸದ್ದಾದವೋ...

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.