ಬೆಕೆನ್ಹ್ಯಾಮ್: ಭಾರತದ ಕ್ರಿಕೆಟ್ ತಂಡಕ್ಕೆ ಮರುಪ್ರವೇಶ ಮಾಡುವುದು ಅಪರೂಪದ ಸಂಗತಿ. ಅಂತಹ ಅವಕಾಸ ಗಳಿಸಿದ ಕೆಲವೇ ಆಟಗಾರರಲ್ಲಿ ಕನ್ನಡಿಗ ಕರುಣ್ ನಾಯರ್ ಅವರೂ ಒಬ್ಬರಾಗಿದ್ದಾರೆ.

'ನನಗೆ ಇದು ನಿಜಕ್ಕೂ ವಿಶೇಷ ಎನಿಸುತ್ತಿದೆ. ನಾನು ಅದೃಷ್ಟವಂತ ಮತ್ತು ಈ ಅವಕಾಶಕ್ಕಾಗಿ ಕೃತಜ್ಞನಾಗಿರುವೆ. ಮತ್ತೊಮ್ಮೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ನನಗೆ ಸಾಧ್ಯವಾಗಿದೆ. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಯಶಸ್ವಿಯಾಗುವುದೇ ನನ್ನ ಧ್ಯೇಯ’ ಎಂದು ಕರುಣ್ ಅವರು ಬಿಸಿಸಿಐ ಡಾಟ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕರುಣ್ ಅವರು ಭಾರತ ತಂಡಕ್ಕೆ ಎಂಟು ವರ್ಷಗಳ ನಂತರ ಮರಳಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಅವರದ್ದು. ಅವರು ಭಾರತ ಎ ತಂಡದಲ್ಲಿ ಆಡಿದ ನಂತರ ಟೆಸ್ಟ್ ಬಳಗಕ್ಕೆ ಮರಳಿದಾಗ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಸ್ವಾಗತಿಸಿದ್ದರು.

‘ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯುವುದು ಸುಲಭವಲ್ಲ. ನಾವು ಪೇರಿಸುವ ರನ್ಗಳು, ಅದರೊಂದಿಗೆ ಎಂದಿಗೂ ಸೋಲದ ಗಟ್ಟಿ ಛಲ ಮುಖ್ಯವಾಗುತ್ತವೆ. ಇದು ತಂಡದ ಎಲ್ಲರಿಗೂ ಪ್ರೇರಣೆಯಾಗುವಂತಹ ಯಶೋಗಾಥೆ. ಮರಳಿ ಬಂದಿರುವು ಕರುಣ್ಗೆ ಸ್ವಾಗತ’ ಎಂದು ಕೋಚ್ ಗಂಭೀರ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಬಾಲ್ಯದ ಗೆಳೆಯ ಮತ್ತು ಕರ್ನಾಟಕ ತಂಡದಲ್ಲಿ ಜೊತೆಯಾಗಿ ಆಡಿರುವ ಕೆ.ಎಲ್. ರಾಹುಲ್ ಕೂಡ ಕರುಣ್ ಮರಳುವಿಕೆಯನ್ನು ಸ್ವಾಗತಿಸಿದ್ದಾರೆ.

‘ದೀರ್ಘ ಕಾಲದಿಂದ ಕರುಣ್ ಮತ್ತು ನನ್ನ ಒಡನಾಟವಿದೆ. ಏಕಾಂಗಿಯಾಗಿ ಇಂಗ್ಲೆಂಡ್ನಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತ ಬಹಳಷ್ಟು ಸಮಯ ಶ್ರಮಪಟ್ಟಿದ್ದಾರೆ. ಅವರು ಪಟ್ಟ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಅವರು ಭಾರತ ತಂಡಕ್ಕೆ ಮರಳಿ ಬಂದಿರುವುದು ಕರುಣ್ ಹಾಗೂ ಅವರ ಕುಟುಂಬಕ್ಕೆ ವಿಶೇಷ ಸಂತಸದ ಸಂಗತಿ. ನಮ್ಮಂತಹ ಗೆಳೆಯರಿಗೂ ಸಂತಸದ ಸಂಗತಿ’ ಎಂದು ರಾಹುಲ್ ಹೇಳಿದ್ದಾರೆ.

‘ಕರುಣ್ ಅವರು ಮರಳಿ ಬಂದಿರುವುದು ಒಂದು ಪ್ರೇರಣೆಯ ಕತೆಯಾಗಿದೆ. ಅವರ ಅನುಭವ ಮತ್ತು ಕೌಂಟಿ ಕ್ರಿಕೆಟ್ನಲ್ಲಿ ಕಲಿತ ಸಂಗತಿಗಳಿಂದ ಭಾರತ ಕ್ರಿಕೆಟ್ ತಂಡಕ್ಕೆ ಲಾಭವಾಗಲಿದೆ’ ಎಂದೂ ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಭಾರತ ತಂಡದ ಡ್ರೆಸಿಂಗ್ ರೂಮ್ಗೆ ಮರಳಿರುವ ಈ ಕ್ಷಣವನ್ನು ಮನತುಂಬಿ ಆನಂದಿಸುತ್ತಿದ್ದೇನೆ. ಈ ಅನುಭೂತಿಯು ನನಗೆ ಅಮೂಲ್ಯವಾಗಿದೆ. ನನ್ನೊಳಗೆ ಹಲವಾರು ಭಾವನೆಗಳಿವೆ. ಆದರೆ ಅವುಗಳನ್ನು ವ್ಯಕ್ತಪಡಿಸುವ ಬಗೆ ಈಗ ಹೊಳೆಯುತ್ತಿಲ್ಲ. ಇದೊಂದು ಅನನ್ಯ ಭಾವವಾಗಿದೆ’ ಎಂದು ಕರುಣ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.