ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ | ಅಮೆರಿಕ ಹವೆಗೆ ಒಗ್ಗಿಕೊಳ್ಳಲು ಭಾರತ ತಂಡದ ಆಟಗಾರರು ಯತ್ನ

ನಾಸೌ ಕೌಂಟಿ ಮೈದಾನದಲ್ಲಿ ಅಭ್ಯಾಸ
Published 29 ಮೇ 2024, 22:30 IST
Last Updated 29 ಮೇ 2024, 22:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಎರಡು ತಿಂಗಳ ಕಾಲ ಐಪಿಎಲ್‌ನ ಇರುಳು ಬೆಳಕಲ್ಲಿ ಬಿಡುವಿಲ್ಲದ ಕ್ರಿಕೆಟ್‌ ಆಡಿದ್ದ ಭಾರತ ತಂಡದ ಆಟಗಾರರು ವಿಭಿನ್ನವಾದ ಇಲ್ಲಿನ ಹವಾಮಾನದಲ್ಲಿ ಟಿ20 ವಿಶ್ವಕಪ್‌ ಕ್ರಿಕೆಟ್‌ಗೆ ಪೂರ್ವಭಾವಿಯಾಗಿ ಬುಧವಾರ ಲಘು ಅಭ್ಯಾಸದಲ್ಲಿ ತೊಡಗಿದರು. ಭಾರತ ತನ್ನ ಪೂರ್ವಭಾವಿ ಹಂತದ ಪಂದ್ಯಗಳನ್ನು ಸ್ಥಳೀಯ ಕಾಲಮಾನ ಬೆಳಿಗ್ಗೆ 10.30ಕ್ಕೆ ಆಡಲಿದೆ. ಕೊಹ್ಲಿ ಅಭ್ಯಾಸದಲ್ಲಿ ಕಾಣಿಸಿಕೊಳ್ಳಲಿಲ್ಲ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಆಡಿದ್ದ ವಿರಾಟ್‌ ಕೊಹ್ಲಿ ವೈಯಕ್ತಿಕ ಕೆಲಸಗಳಿಂದ ಐಪಿಎಲ್‌ನಲ್ಲಿ ಆಡಲಿಲ್ಲ. ಅವರು ಶುಕ್ರವಾರ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಆದರೆ ದೀರ್ಘ ಅವಧಿಯ ವಿಮಾನ ಪ್ರಯಾಣದ ನಂತರ ಅವರು, ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಶನಿವಾರ ಸಿಗುವ ಏಕೈಕ ವಾರ್ಮ್‌ಗೇಮ್‌ನಲ್ಲಿ ಆಡುವರೇ ಎಂಬುದು ಸ್ಪಷ್ಟವಾಗಿಲ್ಲ.

ಬೆಳಿಗ್ಗೆ ಇಲ್ಲಿ ಅಷ್ಟೇನೂ ಸೆಕೆ ಇರುವುದಿಲ್ಲ. 25 ರಿಂದ 27 ಡಿಗ್ರಿ ಸೆಲ್ಷಿಯಸ್‌ನ ಹಿತಕರ ಅನುಭವ ಸಿಗಲಿದೆ. ಭಾರತದ ನೆರವು ಸಿಬ್ಬಂದಿ, ಇಲ್ಲಿನ ಹೊರವಲಯದ ನಾಸೌ ಕೌಂಟಿ ಮೈದಾನದಲ್ಲಿ ಆಟಗಾರರಿಗೆ ಬೆಳಿಗ್ಗೆ ಇಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳಲು ಅವಕಾಶ ನೀಡಿದರು.  14 ಆಟಗಾರರು ಪಾಲ್ಗೊಂಡಿದ್ದು, ಜಾಗಿಂಗ್‌ ಮತ್ತು ಲಘು ವ್ಯಾಯಾಮದಲ್ಲಿ ತೊಡಗಿದರು.

ಇಲ್ಲಿನ ಕಾಲಮಾನಕ್ಕೆ ಅವರು ಒಗ್ಗಿಕೊಳ್ಳಲುತ್ತಿದ್ದಾರೆ. ಇವತ್ತು ಮೊದಲ ಬಾರಿಗೆ ಅವರು ಮೈದಾನಲ್ಲಿ ಅಭ್ಯಾಸ ನಡೆಸಿದರು ಎಂದು ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್‌ ಸೋಹಮ್ ದೇಸಾಯಿ ಬಿಸಿಸಿಐ ಟಿ.ವಿ.ಗೆ ತಿಳಿಸಿದರು.

ಕಳೆದ ಬಾರಿ ವೆಸ್ಟ್‌ ಇಂಡೀಸ್ ಪ್ರವಾಸದ ಸಂದರ್ಭದಲ್ಲಿ ಭಾರತ ತಂಡ ಫ್ಲಾರಿಡಾದ ಲಾಡೆರ್‌ಡೇಲ್‌ನಲ್ಲಿ ಸೀಮಿತ ಓವರುಗಳ ಪಂದ್ಯ ಆಡಿತ್ತು.

‘ಮೊದಲ ಬಾರಿ ನಾವು ನ್ಯೂಯಾರ್ಕ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದೇವೆ. ಇದೊಂದು ಖುಷಿಯ ಸಂದರ್ಭ’ ಎಂದು ಆಲ್‌ರೌಂಡರ್‌ ರವೀಂದ್ರ ಜಡೇಜಾ ಹೇಳಿದರು.

‘ನಾವು ಇವತ್ತು ಕ್ರಿಕೆಟ್‌ ಆಡಿಲ್ಲ. ತಂಡವಾಗಿ ಇಲ್ಲಿ ಸೇರಿಕೊಂಡೆವು. ಹವಾಮಾನ ಉತ್ತಮವಾಗಿದೆ’ ಎಂದರು.

‌ಹಾರ್ದಿಕ್  ಪಾಂಡ್ಯ ಕೂಡ ಇಲ್ಲಿನ ಹದವಾದ ಬಿಸಿಲು ಕಂಡು ಖುಷಿಯಾಗಿದ್ದರು. ಇಲ್ಲಿನ ಕ್ರಿಕೆಟ್‌ ಆಸಕ್ತಿಗಳನ್ನು ತಿಳಿದುಕೊಳ್ಳಲು ಸೂರ್ಯಕುಮಾರ್ ಯಾದವ್ ಉತ್ಸುಕರಾಗಿದ್ದರು.

‘ಅಮೆರಿಕದಲ್ಲಿ ಕ್ರಿಕೆಟ್‌ ಆಸಕ್ತಿ ಬೆಳೆಯುತ್ತಿದೆ ಎಂದು ಕೇಳಿ ತಿಳಿದುಕೊಂಡಿದ್ದೇನೆ. ನಾವು ಉತ್ಸುಕರಾಗಿದ್ದೇವೆ. ಮೊದಲ ದಿನ ಅಹ್ಲಾದಕರವಾಗಿತ್ತು. ಮುಂದಿನ ದಿನಗಳನ್ನು ಎದುರುನೋಡುತ್ತಿದ್ದೇವೆ’ ಎಂದು ಸೂರ್ಯ ಹೇಳಿದರು.

ಮೊದಲ (2007) ಟಿ20 ವಿಶ್ವಕಪ್ ವಿಜೇತರಾದ ಭಾರತ ಮೊದಲ ಪಂದ್ಯವನ್ನು ಜೂನ್‌ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ನಂತರ ಪಂದ್ಯ ಜೂನ್ 9ರಂದು ಪಾಕಿಸ್ತಾನ ವಿರುದ್ಧ ನಡೆಯಲಿದೆ. ಅಮೆರಿಕದ ವಿರುದ್ಧ ಪಂದ್ಯ ಜೂನ್‌ 12ರಂದು ನಡೆಯಲಿದೆ. ಫ್ಲಾರಿಡಾದಲ್ಲಿ ಕೆನಡಾ ವಿರುದ್ಧ ಅಂತಿಮ ಲೀಗ್ ಪಂದ್ಯ ಜೂನ್‌ 15ರಂದು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT