ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | DC vs MI: ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್ ಜಯ
LIVE

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ರೋಹಿತ್ ಶರ್ಮಾ ಪಡೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.
Last Updated 11 ಅಕ್ಟೋಬರ್ 2020, 17:50 IST
ಅಕ್ಷರ ಗಾತ್ರ
17:3411 Oct 2020

ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರಿದ ಮುಂಬೈ

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ಸವಾಲಿನ ಗುರಿಯನ್ನು ಮುಂಬೈ ಇಂಡಿಯನ್ಸ್‌ ತಂಡ ಇನ್ನೂ 5 ವಿಕೆಟ್‌ ಬಾಕಿ ಇರುವಂತೆಯೇ ಗೆದ್ದು ಬೀಗಿತು. ಈ ಜಯದೊಂದಿಗೆ ಮುಂಬೈ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಕೊನೆಯ ಓವರ್‌ನಲ್ಲಿ ಬೇಕಾಗಿದ್ದ 7 ರನ್‌ಗಳನ್ನು ಪೊಲಾರ್ಡ್ ಮತ್ತು ಕೃಣಾಲ್‌ ಜೋಡಿ ಕೇವಲ 4 ಎಸೆತಗಳಲ್ಲೇ ಕಲೆಹಾಕಿತು.

ಬೌಲರ್‌: ಮಾರ್ಕಸ್‌ ಸ್ಟೋಯಿನಸ್‌ (4 1 1 4)

17:2911 Oct 2020

ಕೊನೆಯ ಓವರ್‌ನಲ್ಲಿ ಬೇಕು 7 ರನ್

19 ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ ತಂಡ 5 ವಿಕೆಟ್‌ ಕಳೆದುಕೊಂಡು 156 ರನ್ ಗಳಿಸಿದೆ.

ಬಾಕಿ ಇರುವ ಒಂದು ಓವರ್‌ನಲ್ಲಿ 7 ರನ್ ಗಳಿಸಬೇಕಾಗಿದೆ.

19ನೇ ಓವರ್‌: ಎನ್ರಿಕ್‌ ನೋರ್ಟ್ರ್ಜೆ (1 0 0 1 1 0)

17:2111 Oct 2020

18ನೇ ಓವರ್ ಮುಕ್ತಾಯ: ಕಿಶನ್ ಔಟ್

28 ರನ್‌ ಗಳಿಸಿದ್ದ ಇಶಾನ್‌ ಕಿಶನ್‌ 18ನೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಇದರೊಂದಿಗೆ ರಬಾಡ ಈ ಟೂರ್ನಿಯುಲ್ಲಿ 18ನೇ ವಿಕೆಟ್ ಪಡೆದುಕೊಂಡರು.

18 ಓವರ್‌ ಅಂತ್ಯಕ್ಕೆ ಮುಂಬೈ 5 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿದೆ.

ಉಳಿದಿರುವ 12 ಎಸೆತಗಳಲ್ಲಿ 10 ರನ್‌ ಬೇಕಾಗಿದೆ. ಪೊಲಾರ್ಡ್‌ ಹಾಗೂ ಕೃಣಾಲ್‌ ಪಾಂಡ್ಯ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಗಿಸೊ ರಬಾಡ (1 6 W 0 1 0)

17:1611 Oct 2020

17ನೇ ಓವರ್‌ ಮುಕ್ತಾಯ

17ನೇ ಓವರ್‌ ಅಂತ್ಯಕ್ಕೆ ಮುಂಬೈ 145 ರನ್ ಗಳಿಸಿದೆ. 3 ಓವರ್‌ಗಳ ಆಟ ಬಾಕಿ ಉಳಿದಿದ್ದು, ಗೆಲ್ಲಲು 18 ರನ್ ಬೇಕಾಗಿದೆ. ಪೊಲಾರ್ಡ್ ಮತ್ತು ಕಿಶನ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಎನ್ರಿಚ್‌ ನೊರ್ಟ್ರ್ಜೆ (1 1 0 0 4 Wd 1)

17:1211 Oct 2020

16ನೇ ಓವರ್ ಮುಕ್ತಾಯ

16 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ 4 ವಿಕೆಟ್‌ಗೆ 137 ರನ್‌ ಗಳಿಸಿದೆ.

ಕಿಶನ್‌ ಮತ್ತು ಕೀರನ್‌ ಪೊಲಾರ್ಡ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮಾರ್ಕಸ್ ಸ್ಟೋಯಿನಸ್‌ (0 W 1 1 1 4)

17:0611 Oct 2020

ಪೆವಿಲಿಯನ್‌ಗೆ ಮರಳಿದ ಹಾರ್ದಿಕ್‌

ಸೂರ್ಯಕುಮಾರ್‌ ಯಾದವ್‌ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ಹಾರ್ದಿಕ್‌ ಪಾಂಡ್ಯ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದ್ದಾರೆ. ಸ್ಟೋಯಿನಸ್‌ ಎಸೆದ 16ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

17:0111 Oct 2020

15ನೇ ಓವರ್‌ ಮುಕ್ತಾಯ: ಯಾದವ್ ವಿಕೆಟ್ ಪತನ

ಲೀಲಾಜಾಲವಾಗಿ ಬ್ಯಾಟ್‌ ಬೀಸುತ್ತಿರುವ ಸೂರ್ಯಕುಮಾರ್‌ ಯಾದವ್‌ 32 ಎಸೆತಗಳಲ್ಲಿ 53 ರನ್‌ ಗಳಿಸಿ ಔಟಾಗಿದ್ದಾರೆ.

ಇನ್ನೊಂದು ತುದಿಯಲ್ಲಿ ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದು, ಮುಂಬೈ ತಂಡ 3 ವಿಕೆಟ್‌ ನಷ್ಟಕ್ಕೆ 130 ರನ್ ಗಳಿಸಿದ್ದಾರೆ.

ಬೌಲರ್‌: ಕಗಿಸೊ ರಬಾಡ (4 2 6 1 1 W)

16:5811 Oct 2020

14ನೇ ಓವರ್ ಮುಕ್ತಾಯ

ಮುಂಬೈ 2 ವಿಕೆಟ್‌ಗೆ 116 ರನ್ ಗಳಿಸಿದೆ. ಯಾದವ್‌ (40) ಮತ್ತು ಕಿಶನ್‌ (15) ಕ್ರಿಸ್‌ನಲ್ಲಿದ್ದಾರೆ.

ಬೌಲರ್‌: ಮಾರ್ಕಸ್ ಸ್ಟೋಯಿನಸ್ (1 1 6 1 1 4)

16:5211 Oct 2020

13ನೇ ಓವರ್‌ ಮುಕ್ತಾಯ

ಮುಂಬೈ ತಂಡ 13ನೇ ಓವರ್‌ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 103 ರನ್ ಗಳಿಸಿದೆ. ಡೆಲ್ಲಿ ಈ ಹಂತದಲ್ಲಿ 2 ವಿಕೆಟ್‌ ಕಳೆದುಕೊಂಡು 95 ರನ್ ಕಲೆಹಾಕಿತ್ತು.

ಬೌಲರ್‌: ಅಕ್ಷರ್ ಪಟೇಲ್ (0 4 4 1 1 2)

16:4911 Oct 2020

12ನೇ ಓವರ್‌ ಮುಕ್ತಾಯ

12 ಓವರ್‌ ಆಟ ಮುಗಿದಿದ್ದು ಮುಂಬೈ 2 ವಿಕೆಟ್‌ ನಷ್ಟಕ್ಕೆ 90 ರನ್‌ ಗಳಿಸಿದೆ.

ಬೌಲರ್‌: ಆರ್‌.ಅಶ್ವಿನ್‌ (4 1 1 1 1 1)