ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ನಾವಿದ್ದೇವೆ: ಹ್ಯಾಜಲ್‌ವುಡ್‌

Last Updated 20 ಏಪ್ರಿಲ್ 2020, 14:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ‘ಕ್ರಿಕೆಟ್‌ ಆಸ್ಟ್ರೇಲಿಯಾವು (ಸಿಎ) ಕೋವಿಡ್‌–19 ಪಿಡುಗಿನಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ವಿಷಯ ತಿಳಿದು ಅಚ್ಚರಿಯಾಗಿದೆ. ಈ ಸಮಯದಲ್ಲಿ ಆಟಗಾರರೆಲ್ಲಾ ಮಂಡಳಿಯ ಜೊತೆ ಕೈಜೋಡಿಸುತ್ತೇವೆ. ಕ್ರಿಕೆಟ್‌ ಆಸ್ಟ್ರೇಲಿಯಾವನ್ನು ಈ ಸಂಕಷ್ಟದಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತೇವೆ’ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರ ಜೋಶ್‌ ಹ್ಯಾಜಲ್‌ವುಡ್, ಸೋಮವಾರ ಹೇಳಿದ್ದಾರೆ.

‘ಕೊರೊನಾದಿಂದಾಗಿ ಮಂಡಳಿಯ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿರಬಹುದು. ಅದನ್ನು ಅಲ್ಲಗಳೆಯುವುದಿಲ್ಲ. ಸಿಎ ಆರ್ಥಿಕವಾಗಿ ಬಲಿಷ್ಠವಾಗಿದ್ದಾಗ ನಾವೆಲ್ಲಾ ಜೊತೆಗಿದ್ದೆವು. ಈಗ ಮಂಡಳಿಯು ಕಷ್ಟದಲ್ಲಿದೆ. ಈ ಸಮಯದಲ್ಲೂ ಅದರ ಜೊತೆಗೆ ಇರಬೇಕು. ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯ’ ಎಂದಿದ್ದಾರೆ.

ಈ ಮೂಲಕ ವೇತನ ಕಡಿತಕ್ಕೆ ಆಟಗಾರರೆಲ್ಲಾ ಒಪ್ಪಿಗೆ ಸೂಚಿಸುವ ಸುಳಿವು ನೀಡಿದ್ದಾರೆ.

ವೇತನದ ವಿಚಾರವಾಗಿ ಸಿಎ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆಯ (ಎಸಿಎ) ನಡುವೆ 2017ರಲ್ಲಿ ಸಂಘರ್ಷ ಏರ್ಪಟ್ಟಿತ್ತು.

ಈ ಕುರಿತು ಮಾತನಾಡಿರುವ ಹ್ಯಾಜಲ್‌ವುಡ್‌ ‘ಸಿಎ ಹಾಗೂ ಎಸಿಎ ನಡುವಣ ಸಂಬಂಧ ಈಗ ಸಾಕಷ್ಟು ಸುಧಾರಿಸಿದೆ. ಎರಡೂ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಕೊರೊನಾದಿಂದ ತಲೆದೋರಿರುವ ಹಣಕಾಸಿನ ಮುಗ್ಗಟ್ಟಿನಿಂದ ಶೀಘ್ರವೇ ಚೇತರಿಸಿಕೊಳ್ಳಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT