ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ನಿವೃತ್ತಿ ಸದ್ಯಕ್ಕಿಲ್ಲ‘

Published 7 ಡಿಸೆಂಬರ್ 2023, 16:34 IST
Last Updated 7 ಡಿಸೆಂಬರ್ 2023, 16:34 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ತಂಡದ ಬ್ಯಾಟರ್ ಸ್ಟೀವ್ ಸ್ಮಿತ್ ಅವರು  ಕ್ರಿಕೆಟ್‌ನಿಂದ ನಿವೃತ್ತಿ ನಿರ್ಧಾರ ಕೈಗೊಂಡಿಲ್ಲ.

ಪಾಕಿಸ್ತಾನ ಎದುರು ನಡೆಯಲಿರುವ ಟೆಸ್ಟ್ ಸರಣಿಯ ಸಂದರ್ಭದಲ್ಲಿ ತಾವು ನಿವೃತ್ತಿಯಾಗುವುದಾಗಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಈಗಾಗಲೇ ಇಂಗಿತ ವ್ಯಕ್ತಪಡಿಸಿದ್ದಾರೆ.  ಸಿಡ್ನಿಯಲ್ಲಿ ಜನವರಿ 3ರಿಂದ ನಡೆಯಲಿರುವ ಟೆಸ್ಟ್‌ನಲ್ಲಿ ಅವರಿಗೆ ಬೀಳ್ಕೊಡುವ ಸಾಧ್ಯತೆ ಇದೆ.

ಅವರೊಂದಿಗೆ ಸ್ಮಿತ್ ಕೂಡ ವಿದಾಯ ಹೇಳುತ್ತಾರೆಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಮಿತ್ ಅವರ ಆಪ್ತ ಸಹಾಯಕ ವಾರೆನ್ ಕ್ರೇಗ್, ‘ಸ್ಮಿತ್ ಅವರು ಇನ್ನೂ ತಮ್ಮ  ವೃತ್ತಿಜೀವನದಲ್ಲಿ ಸಾಧಿಸಬೇಕಾದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನಿವೃತ್ತಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದೊಂಡಿಲ್ಲ’ ಎಂದರು.

ಆಸ್ಟ್ರೇಲಿಯಾ ತಂಡವು ಮೂರು ಬಾರಿ  ಆ್ಯಷಸ್ ಟ್ರೋಫಿ, ಏಕದಿನ ವಿಶ್ವಕಪ್ (2015 ಮತ್ತು 2023), ಟಿ20 ವಿಶ್ವಕಲ್ (2021) ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ (2023) ಗೆದ್ದಾಗ ಸ್ಮಿತ್ ಆಡಿದ್ದರು.

ಆದರೆ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಸ್ಮಿತ್ ಹೆಚ್ಚು ರನ್‌ ಗಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT