ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕಪ್ ಆರ್‌ಸಿಬಿ ಅಭಿಮಾನಿಗಳಿಗೆ: ಶ್ರೇಯಾಂಕ ಪಾಟೀಲ

Published 17 ಮಾರ್ಚ್ 2024, 23:34 IST
Last Updated 17 ಮಾರ್ಚ್ 2024, 23:34 IST
ಅಕ್ಷರ ಗಾತ್ರ

ನವದೆಹಲಿ: ‘ಈ ಸಲ ಕಪ್ ನಮ್ದೆ ಎಂದು ಅವರು (ಪುರುಷರ ತಂಡ) ಹೇಳುತ್ತಲೇ ಇದ್ದರು. ನಾವು ಈಗ ಗೆದ್ದೆವು. ಇದು ಅಭಿಮಾನಿಗಳಿಗೆ ಸಮರ್ಪಣೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಹೇಳಿದರು. 

ಫೈನಲ್ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂಡದಲ್ಲಿ ಪರಸ್ಪರ ಎಲ್ಲರೂ ಕುಟುಂಬದ ಸದಸ್ಯರಂತೆ ಇದ್ದೆವು. ಮುಖ್ಯ ಕೋಚ್ ಲೂಕ್ ವಿಲಿಯಮ್ಸ್ ಅವರು ತಂಡದಲ್ಲಿ ಸಮಚಿತ್ತ ನೆಲೆಸುವಂತೆ ಮಾಡಿದವರು. ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಗೆದ್ದಾಗ ಭಾವುಕರಾಗಿ ಕಣ್ಣೀರು ಹಾಕಿದ್ದೆವು. ಈ ಪಂದ್ಯದಲ್ಲಿಯೂ ಅಂತಹದೊಂದು  ಆನಂದ ಅನುಭವಿಸುವ ಇರಾದೆ ಇತ್ತು’ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಎಲಿಸ್ ಪೆರಿ ‘ಪಂದ್ಯಕ್ಕೆ ಮುಖ್ಯ ತಿರುವು ನೀಡಿದ್ದ ಸೋಫಿ ಮಾಲಿನೊ. ಶ್ರೇಯಾಂಕ ಚಿಕ್ಕ ವಯಸ್ಸಿನ ಆಟಗಾರ್ತಿ. ಆದರೆ ಪಂದ್ಯ ಗೆಲ್ಲಿಸಬಲ್ಲ ಛಲಗಾತಿ. ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT