ಭಾನುವಾರ, ಡಿಸೆಂಬರ್ 8, 2019
21 °C

ಜಪಾನ್‌ ಸೋಲು ತಪ್ಪಿಸಿದ ಹೊಂಡಾ

Published:
Updated:

ಎಕತೆರಿನ್‌ಬರ್ಗ್‌ : ರಕ್ಷಣಾ ವಿಭಾಗದ ವಿಶ್ವಸನೀಯ ಆಟಗಾರ, ಕೇಸುಕೆ ಹೊಂಡಾ ಅವರು ಎಕತೆರಿನ್‌ಬರ್ಗ್‌ ಅರೆನಾದಲ್ಲಿ ಜಪಾನ್‌ ತಂಡದ ಕೈ ಹಿಡಿದರು.

ಒತ್ತಡ ಮೆಟ್ಟಿ ನಿಂತು ಅವರು ಗಳಿಸಿದ ಅಮೋಘ ಗೋಲಿನ ಬಲದಿಂದ ಈ ತಂಡ ವಿಶ್ವಕಪ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ರೋಚಕ ಡ್ರಾ ಸಾಧಿಸಿತು. ಈ ಮೂಲಕ ಸೆನೆಗಲ್ ಜೊತೆ ಪಾಯಿಂಟ್ ಹಂಚಿಕೊಂಡಿತು.

ಮೊದಲ ಪಂದ್ಯಗಳಲ್ಲಿ ಗೆಲುವು ಸಾಧಿಸಿ ತಲಾ ಮೂರು ಪಾಯಿಂಟ್‌ಗಳೊಂದಿಗೆ ಇಲ್ಲಿಗೆ ಬಂದಿದ್ದ ಉಭಯ ತಂಡಗಳು ‘ಎಚ್‌’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸುವ ಉದ್ದೇಶದಿಂದ ಜಿದ್ದಾಜಿದ್ದಿಯ ಹೋರಾಟಕ್ಕೆ ಇಳಿದವು.

ಸ್ಯಾಡಿಯೊ ಮಾನೆ 11ನೇ ನಿಮಿಷ ದಲ್ಲಿ ಗಳಿಸಿದ ಸುಲಭ ಗೋಲಿನೊಂದಿಗೆ ಸೆನೆಗಲ್‌ ಖಾತೆ ತೆರೆಯಿತು. 34ನೇ ನಿಮಿಷದಲ್ಲಿ ತಕಾಶಿ ಇನೂಯಿ ಅವರ ಗೋಲಿನೊಂದಿಗೆ ಜಪಾನ್‌ ತಿರುಗೇಟು ನೀಡಿತು. ದ್ವಿತೀಯಾರ್ಧದಲ್ಲೂ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಮೋಸಾ ವಾಘೆ 71ನೇ ನಿಮಿಷದಲ್ಲಿ ಗಳಿಸಿದ ಗೋಲು ಸೆನೆಗಲ್‌ಗೆ ಮುನ್ನಡೆ ಗಳಿಸಿಕೊಟ್ಟಿತು. ನಂತರ ಸೆನೆಗಲ್‌ನ ರಕ್ಷಣಾ ವಿಭಾಗ ಚುರುಕಿನ ಆಟವಾಡಿ ಎದುರಾಳಿಗಳ ಪ್ರಯತ್ನಗಳಿಗೆ ಅಡ್ಡಿಯಾಯಿತು. ಆದರೆ 78ನೇ ನಿಮಿಷದಲ್ಲಿ ಈ ರಕ್ಷಣಾ ಗೋಡೆಯನ್ನು ಛಿದ್ರ ಮಾಡಿದ ಹೊಂಡಾ ಅವರು ಜಪಾನ್ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು