ಐಎಸ್‌ಎಲ್‌: ಗೋವಾಗೆ ಭರ್ಜರಿ ಜಯ

7

ಐಎಸ್‌ಎಲ್‌: ಗೋವಾಗೆ ಭರ್ಜರಿ ಜಯ

Published:
Updated:
Deccan Herald

ಗೋವಾ: ತವರಿನ ಪ್ರೇಕ್ಷಕರ ಮುಂದೆ ದ್ವಿತೀಯಾರ್ಧದಲ್ಲಿ ಐದು ಗೋಲುಗಳನ್ನು ಗಳಿಸಿದ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯರು ನಾರ್ತ್ ಈಸ್ಟ್‌ ಯುನೈಟೆಡ್‌ ತಂಡವನ್ನು 5–1ರಿಂದ ಮಣಿಸಿದರು. ನಾರ್ತ್ ಈಸ್ಟ್ ತಂಡದ ಏಕೈಕ ಗೋಲು ಕೂಡ ದ್ವಿತೀಯಾರ್ಧದಲ್ಲೇ ಮೂಡಿ ಬಂತು.

ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ದ್ವಿತೀಯಾರ್ಧದಲ್ಲಿ ಗೋವಾ ಆಕ್ರಮಣಕಾರಿ ಆಟಕ್ಕೆ ನಾರ್ತ್ ಈಸ್ಟ್‌ ದಂಗಾಯಿತು. ಫೆರಾನ್ ಕೊರೊಮಿನಾಸ್ (59 ಮತ್ತು 84ನೇ ನಿಮಿಷ), ಎಡು ಬೇಡಿಯಾ (69ನೇ ನಿ), ಹ್ಯೂಗೋ ಬೌಮೋಸ್ (71ನೇ ನಿ) ಹಾಗೂ ಮಿಗುವೆಲ್ ಫೆರ್ನಾಂಡಿಸ್ (90ನೇ ನಿಮಿಷ) ಗೋಲು ಗಳಿಸಿದರು.

ನಾರ್ತ್ ಈಸ್ಟ್ ಪರ ನಾಯಕ ಬಾರ್ತಲೊಮ್ಯೊ ಒಗ್ಬಚೆ 90ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಈ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಗೋವಾ ಮೂರನೇ ಸ್ಥಾನಕ್ಕೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !