ಡೆನ್ಮಾರ್ಕ್‌ ಪಡೆಗೆ ಕಾಂಗರೂಗಳ ಸವಾಲು

7
ಸಿ ಗುಂಪಿನ ಪಂದ್ಯ: ಎರಿಕ್‌ಸನ್‌, ಯೂಸುಫ್‌ ಪೌಲ್ಸೆನ್‌ ಮೇಲೆ ಹೆಚ್ಚಿದ ನಿರೀಕ್ಷೆ

ಡೆನ್ಮಾರ್ಕ್‌ ಪಡೆಗೆ ಕಾಂಗರೂಗಳ ಸವಾಲು

Published:
Updated:

ಸಮಾರಾ, ರಷ್ಯಾ: ಇಲ್ಲಿನ ಸಮಾರಾ ಅರೆನಾದಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಬಲಿಷ್ಠ ಡೆನ್ಮಾರ್ಕ್‌ ತಂಡವನ್ನು ಆಸ್ಟ್ರೇಲಿಯಾ ಎದುರಿಸಲಿದೆ. 

‘ಸಿ’ ಗುಂಪಿನ ಈ ಪಂದ್ಯದಲ್ಲಿ ಗೆದ್ದು ಪ್ರೀ ಕ್ವಾಟರ್‌ಫೈನಲ್‌ ತಲುಪುವ ವಿಶ್ವಾಸದಲ್ಲಿದೆ ಡೆನ್ಮಾರ್ಕ್‌ ತಂಡ. ತನ್ನ ಮೊದಲ ಪಂದ್ಯದಲ್ಲಿ  ತಂಡವು ಪೆರು ತಂಡವನ್ನು 1–0 ಗೋಲಿನಿಂದ ಮಣಿಸಿತ್ತು. 

ಇನ್ನೂ ಮೊದಲನೇ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ಸೋಲು ಅನುಭವಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಹೊರಹೋಗಬೇಕಾಗುತ್ತದೆ. ಇದರಿಂದ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ತಂಡ ಸಿಲುಕಿದೆ. 

ಮುಂದಿನ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್‌ ತಂಡವನ್ನು ಎದುರಿಸಬೇಕಿರುವುದರಿಂದ ಈ ‍ಪಂದ್ಯದಲ್ಲಿಯೇ ಜಯ ಸಾಧಿಸುವುದು ಅಗತ್ಯ ಎಂಬ ಯೋಚನೆಯನ್ನು ಡೆನ್ಮಾರ್ಕ್‌ ತಂಡ ಹೊಂದಿದೆ. 

ರಕ್ಷಣಾ ಹಾಗೂ ಮಿಡ್‌ಫೀಲ್ಡ್‌ ವಿಭಾಗಗಳು ಈ ತಂಡದ ಪ್ರಮುಖ ಶಕ್ತಿ. ಮೊದಲ ಪಂದ್ಯದಲ್ಲಿ ಚುರುಕಿನ ಆಟ ಆಡಿದ ಕ್ರಿಸ್ಟಿಯನ್‌ ಎರಿಕ್ಸನ್‌ ಅವರು ಈ ಪಂದ್ಯದ ಪ್ರಮುಖ ಆಕರ್ಷಣೆ. ಮಹತ್ವದ ಈ ಪಂದ್ಯದಲ್ಲಿ ಗೋಲು ಗಳಿಸಿ ತಂಡಕ್ಕೆ ಗೆಲುವು ತಂಡುಕೊಡಲು ಅವರನ್ನು ಮುಂಚೂಣಿ ವಿಭಾಗದಲ್ಲಿ ಆಡಿಸುವ ಸಾಧ್ಯತೆ ಹೆಚ್ಚಿದೆ. 

ಮೊದಲ ಪಂದ್ಯದಲ್ಲಿ ಅಷ್ಟೇನೂ ಪರಿಣಾಮಕಾರಿ ಸಾಮರ್ಥ್ಯ ತೋರದ ರಕ್ಷಣಾ ವಿಭಾಗವು ಆಸ್ಟ್ರೇಲಿಯಾ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಈ ಪಂದ್ಯದಲ್ಲಿ ಹೊಸ ರಣನೀತಿಯೊಂದಿಗೆ ತಂಡವು ಕಣಕ್ಕಿಳಿಯುವ ಸಂಭವವಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !