ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ | ಅನುಪಮಾ, ತರುಣ್ ಸಿಂಗಲ್ಸ್ ಚಾಂಪಿಯನ್

Published 6 ಏಪ್ರಿಲ್ 2024, 15:55 IST
Last Updated 6 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ಅಸ್ತಾನ (ಕಜಕಿಸ್ತಾನ): ಭಾರತದ  ಅನುಪಮಾ ಉಪಾಧ್ಯಾಯ ಮತ್ತು ತರುಣ್ ಮನ್ನೇಪಳ್ಳಿ  ಅವರು ಕಜಕಸ್ತಾನ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್ ಚಾಲೆಂಜ್ ಟೂರ್ನಿಯ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕಳೆದ ತಿಂಗಳು ಪೋಲಿಷ್ ಇಂಟರ್‌ನ್ಯಾಷನಲ್ ಚಾಲೆಂಜ್ ಗೆದ್ದ ಅಲ್ಮೋರಾದ 19 ವರ್ಷದ ಅನುಪಮಾ, 41 ನಿಮಿಷಗಳ ಫೈನಲ್‌ ಪಂದ್ಯದಲ್ಲಿ ಇಶಾರಾಣಿ ಬರುವಾ ವಿರುದ್ಧ 21-15, 21-16 ಅಂತರದಲ್ಲಿ ಜಯಗಳಿಸಿ ಸತತ ಎರಡನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕಳೆದ ಡಿಸೆಂಬರ್‌ನಲ್ಲಿ ಗುವಾಹಟಿಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗಿದ್ದ 22 ವರ್ಷದ ತರುಣ್, ಎಂಟನೇ ಶ್ರೇಯಾಂಕದ ಮಲೇಷ್ಯಾದ ಸೂಂಗ್ ಜೂ ವೆನ್ ಅವರನ್ನು 21-10, 21-19 ಅಂತರದಿಂದ ಸೋಲಿಸಿ ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದರು.

ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಸಂಜಯ ಶ್ರೀವತ್ಸ ಧನರಾಜ್ ಮತ್ತು ಮನೀಷಾ ಕೆ ಜೋಡಿ ಮಲೇಷ್ಯಾದ ವಾಂಗ್ ಟಿಯೆನ್ ಸಿ ಮತ್ತು ಲಿಮ್ ಚಿವ್ ಸಿಯೆನ್ ವಿರುದ್ಧ 21-9, 7-21, 12-21 ಅಂತರದಲ್ಲಿ ಸೋತು, ರನ್ನರ್ ಅಪ್ ಸ್ಥಾನ ಪಡೆಯಿತು.

ಈ ವಾರ ಉತ್ತಮ ಫಾರ್ಮ್‌ನಲ್ಲಿರುವ ಅನುಪಮಾ, ಭಾರತದ ಹರ್ಷಿತಾ ರೌತ್, ಜೆಕ್ ಗಣರಾಜ್ಯದ ಐದನೇ ಶ್ರೇಯಾಂಕದ ಟೆರೆಜಾ ಸ್ವಾಬಿಕೋವಾ, ಸಹ ಆಟಗಾರ್ತಿ ದೇವಿಕಾ ಸಿಹಾಗ್ ಮತ್ತು ಜಪಾನ್‌ನ  ಸೊರಾನೊ ಯೋಶಿಕಾವಾ ಅವರನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದ್ದಾರೆ.

ಮಾಜಿ ಜೂನಿಯರ್ ವಿಶ್ವ ನಂ.1 ಆಟಗಾರ್ತಿ ಅನುಪಮಾ 2021ರಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್, 2022 ಮತ್ತು 2024ರಲ್ಲಿ ಪೋಲಿಷ್ ಓಪನ್ ಹಾಗೂ 2023ರಲ್ಲಿ ತಾಜಿಕಿಸ್ತಾನ್ ಇಂಟರ್‌ನ್ಯಾಷನಲ್‌ ಸೀರೀಸ್ ಗೆದ್ದಿದ್ದಾರೆ.

2022ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಎಸ್.ಶಂಕರ್ ಮುತ್ತುಸಾಮಿ, ನಾಲ್ಕನೇ ಶ್ರೇಯಾಂಕಿತ ಕಜಕಿಸ್ತಾನದ ಡಿಮಿಟ್ರಿ ಪನಾರಿನ್ ಮತ್ತು ವಿಯೆಟ್ನಾಂನ ಏಳನೇ ಶ್ರೇಯಾಂಕದ ಲೆ ಡುಕ್ ಫಾಟ್ ಅವರನ್ನು ಸೋಲಿಸುವ ಮೂಲಕ ತರುಣ್ ಫೈನಲ್ ಪ್ರವೇಶಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT