ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Boxing | ಭಾರತಕ್ಕೆ 22 ಪದಕ ಖಚಿತ

ಏಷ್ಯಾ ಯುವ ಮತ್ತು 22 ವರ್ಷದೊಳಗಿನವರ ಬಾಕ್ಸಿಂಗ್‌
Published 3 ಮೇ 2024, 15:17 IST
Last Updated 3 ಮೇ 2024, 15:17 IST
ಅಕ್ಷರ ಗಾತ್ರ

ಅಸ್ತಾನಾ (ಕಜಕಸ್ತಾನ): ಬ್ರಿಜೇಶ್ ತಮ್ಟಾ ಮತ್ತು ಆರ್ಯನ್ ಅವರು ಇತರ ಐವರು ಬಾಕ್ಸರ್‌ಗಳ ಜೊತೆ ಏಷ್ಯಾ 22 ವರ್ಷದೊಳಗಿನವರ ಮತ್ತು ಯುವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಯುವ ವಿಭಾಗದಲ್ಲಿ ಶುಕ್ರವಾರ ಫೈನಲ್ ತಲುಪಿದರು. ಇದರೊಂದಿಗೆ ವಿವಿಧ ವಿಭಾಗಗಳಲ್ಲಿ ಭಾರತಕ್ಕೆ 22 ಪದಕಗಳು ಖಚಿತವಾಗಿವೆ.

ಈ 22 ರಲ್ಲಿ ಮಹಿಳಾ ವಿಭಾಗದಲ್ಲಿ ಖಚಿತಗೊಂಡಿರುವ 12 ಪದಕಗಳು ಸೇರಿವೆ. ಬ್ರಿಜೇಶ್‌ 48 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ತಾಲೈಬೆಕ್‌ ಇಸುರ್‌ ಅವರನ್ನು 5–0 ಯಿಂದ ಸೋಲಿಸಿದರು.

ರಾಃಉಲ್ ಕುಂದು (75 ಕೆ.ಜಿ), ಆರ್ಯನ್‌ (92 ಕೆ.ಜಿ) ಅವರು ಕ್ರಮವಾಗಿ ಚೀನಾದ ಕಂಜಿಬಾಯಿ ಎರ್ಸಿ ಮತ್ತು ಕಿರ್ಗಿಸ್ತಾನದ ಅಲಿಬಯೇವ್‌ ಟಿನಿಸ್ತಾನ್ ಅವರನ್ನು ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿದರು.

ಸಾಗರ್‌ ಜಾಖರ್ (60 ಕೆ.ಜಿ.ವಿಭಾಗ) ಅವರೂ ಮುನ್ನಡೆದರು. ಆರ್ಯನ್‌ (51 ಕೆ.ಜಿ), ಯಶವರ್ಧನ್ (63.5ಕೆ.ಜಿ) ಮತ್ತು ಪ್ರಿಯಾಂಶು (71 ಕೆ.ಜಿ) ಕೂಡ ಜಯಗಳಿಸಿದರು.

ಕಂಚಿನ ಪದಕ:

ಸುಮಿತ್‌ (67 ಕೆ.ಜಿ) ಮತ್ತು ಸಾಹಿಲ್ (80 ಕೆ.ಜಿ) ಅವರು ಕ್ರಮವಾಗಿ ಕಜಕಸ್ತಾನದ ಸಬಿರ್ಖಾನ್ ತೊರೆಖಾನ್ ಮತ್ತು ಕಿರ್ಗಿಸ್ತನದ ಝಕಿರೋವ್‌ ಮುಖಮದಾಝಿಜ್‌ ಅವರಿಗೆ 0–5 ರಿಂದ ಸೋತು ಕಂಚಿನ ಪದಕ ಗಳಿಸಿದರು.

ಯುವ ಮತ್ತು 22 ವರ್ಷದೊಳಗಿನವರ ವಿಭಾಗದ ಫೈನಲ್‌ ಪಂದ್ಯಗಳು ಕ್ರಮವಾಗಿ ಸೋಮವಾರ ಮತ್ತು ಮಂಗಳವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT