ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಭವೇಶ್‌, ಸಿಮ್ರನ್‌ಗೆ ಪ್ರಶಸ್ತಿ

Published 23 ಏಪ್ರಿಲ್ 2024, 14:16 IST
Last Updated 23 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ನವದೆಹಲಿ: ಭವೇಶ್ ಶೇಖಾವತ್ ಮತ್ತು ಸಿಮ್ರನ್‌ಪ್ರೀತ್ ಕೌರ್ ಬ್ರಾರ್ ಅವರು ಇಲ್ಲಿನ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಆಯ್ಕೆ ಟ್ರಯಲ್ಸ್‌ನಲ್ಲಿ ಕ್ರಮವಾಗಿ ಪುರುಷರ 25 ಮೀಟರ್‌ ರ‍್ಯಾಪಿಡ್‌ ಫೈರ್ ಪಿಸ್ತೂಲ್ ಮತ್ತು ಮಹಿಳೆಯರ 25 ಮೀ ಪಿಸ್ತೂಲ್ (ಟಿ2) ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ಭವೇಶ್‌ 34 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನಿಯಾದರೆ, ಒಎಸ್‌ಟಿ ಟಿ1 ವಿಜೇತ ಅನೀಶ್‌ ಭನ್ವಾಲ (29) ದ್ವಿತೀಯ ಸ್ಥಾನ ಪಡೆದರು. ವಿಜಯವೀರ್‌ ಸಿಧು (22), ಆದರ್ಶ್‌ ಸಿಂಗ್‌ (17), ಅಂಕುರ್ ಗೋಯೆಲ್ ಕ್ರಮವಾಗಿ ನಂತರದ ಸ್ಥಾನ ಗಳಿಸಿದರು.

ಸಿಮ್ರನ್‌ಪ್ರೀತ್‌ ಅವರು ಫೈನಲ್‌ ಸ್ಪರ್ಧೆಯಲ್ಲಿ 37 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನಿಯಾದರು. ಒಲಿಂಪಿಯನ್ ಮನು ಭಾಕರ್ (35) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇಶಾ ಸಿಂಗ್ (30) ಮೂರನೇ ಸ್ಥಾನ ಗಳಿಸಿದರು. ರಿದಮ್ ಸಾಂಗ್ವಾನ್ (24) ಮತ್ತು ಅಭಿದ್ನ್ಯಾ ಪಾಟೀಲ (16) ನಂತರದ ಸ್ಥಾನ ಪಡೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT