ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್‌: ಕ್ವಾರ್ಟರ್‌ಗೆ ಊರ್ವಶಿ

Published 8 ಮಾರ್ಚ್ 2024, 15:54 IST
Last Updated 8 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಬ್ರಿಸ್ಟಲ್: ಭಾರತದ ಊರ್ವಶಿ ಜೋಶಿ ಅವರು ಇಲ್ಲಿ ನಡೆಯುತ್ತಿರುವ ಬ್ರಿಸ್ಟಲ್‌ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಶುಕ್ರವಾರ ಎರಡನೇ ಶ್ರೇಯಾಂಕದ ಸೋಫಿ ಫಡೆಲಿ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು.

2023ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಊರ್ವಶಿ ಅವರು ಇಲ್ಲಿ 16ರ ಘಟ್ಟದ ಪಂದ್ಯದಲ್ಲಿ  7-11, 11-6, 9-11, 11-5, 11-7 ರಿಂದ ಆಸ್ಟ್ರೇಲಿಯಾದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು.

ಆರಂಭಿಕ ಸುತ್ತಿನಲ್ಲಿ 11-4, 11-5, 9-11, 11-9ರಿಂದ ಇಂಗ್ಲೆಂಡ್‌ನ ಜಾಸ್ಮಿನ್ ಕಲಾರ್ ಅವರನ್ನು ಸೋಲಿಸಿದ್ದ ಮಹಾರಾಷ್ಟ್ರದ ಊರ್ವಶಿ ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಎರಿನ್ ಕ್ಲಾಸೆನ್ (ಆಸ್ಟ್ರೇಲಿಯಾ) ಅವರನ್ನು ಎದುರಿಸುವರು. ಕ್ಲಾಸೆನ್‌ ಅವರು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 11-5, 11-5, 14-12ರಿಂದ ಇಂಗ್ಲೆಂಡ್‌ನ ಒಲಿವಿಯಾ ಬೆಸೆಂಟ್ ವಿರುದ್ಧ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT