ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತು ಆರಂಭಕ್ಕೆ ಚೋಪ್ರಾ ಸಿದ್ಧತೆ

ಡೈಮಂಡ್ ಲೀಗ್: ಮೇ 10ರಿಂದ ದೋಹಾ ಲೆಗ್‌
Published 28 ಮಾರ್ಚ್ 2024, 21:45 IST
Last Updated 28 ಮಾರ್ಚ್ 2024, 21:45 IST
ಅಕ್ಷರ ಗಾತ್ರ

ನವದೆಹಲಿ:  ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರು ಮೇ 10ರಂದು ಆರಂಭವಾಗುವ ಡೈಮಂಡ್ ಲೀಗ್ ಸರಣಿಯ ದೋಹಾ ಲೆಗ್‌ನಲ್ಲಿ ಹೊಸ ಋತು ಆರಂಭಿಸುವ ಸಿದ್ಧತೆಯಲ್ಲಿದ್ದಾರೆ.

ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದೊಂದಿಗೆ ತನ್ನ ಹಿಂದಿನ ಋತುವನ್ನು ಮುಗಿಸಿದ್ದ 26 ವರ್ಷದ ಚೋಪ್ರಾ, ಜುಲೈ– ಆಗಸ್ಟ್‌ನಲ್ಲಿ ನಡೆಯುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.

2023ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದಿದ್ದ ಭಾರತದ ಮತ್ತೊಬ್ಬ ಜಾವೆಲಿನ್ ಥ್ರೋ ಅಥ್ಲೀಟ್  ಕಿಶೋರ್‌ ಜೇನಾ ಅವರು ಕತಾರ್ ರಾಜಧಾನಿಯಲ್ಲಿ ನಡೆಯುವ ಡೈಮಂಡ್ ಲೀಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅವರು ಏಷ್ಯನ್‌ ಗೇಮ್ಸ್‌ನಲ್ಲಿ 87.54 ಮೀ ವೈಯಕ್ತಿಕ ಶ್ರೇಷ್ಠ  ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು.

ಡೈಮಂಡ್‌ ಲೀಗ್‌ನಲ್ಲಿ ಚೋಪ್ರಾ, ಜೇನಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಜೆಕ್ ಗಣರಾಜ್ಯದ ಜೇಕಬ್ ವಡ್ಲೇಚಾ ಮತ್ತು ಮಾಜಿ ವಿಶ್ವ ಚಾಂಪಿಯನ್ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಅವರಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದ್ದಾರೆ.

‘ಈ ವರ್ಷ ಒಲಿಂಪಿಕ್ಸ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಪ್ರಮುಖ ಗುರಿಯಾಗಿದೆ. ಅದರ ಜತೆಗೆ 90 ಮೀ ಗಡಿಯನ್ನು ದಾಟುವ ಪ್ರಯತ್ನವೂ ಮುಂದುವರಿಯಲಿದೆ. ಈ ವರ್ಷ ಋತುವನ್ನು ಉತ್ತಮವಾಗಿ ಆರಂಭಿಸಲು ದೋಹಾ ಲೆಗ್‌ ಉತ್ತಮ ವೇದಿಕೆಯಾಗಿದೆ’ ಎಂದು 89.94 ಮೀ ವೈಯಕ್ತಿಕ ಸಾಧನೆ ಹೊಂದಿರುವ ಚೋಪ್ರಾ ಹೇಳಿದ್ದಾರೆ.

‘ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನನ್ನ ಕನಸಾಗಿತ್ತು. ಅದು ನನಸಾಗಿದೆ. ಅದರಲ್ಲೂ ಫೈನಲ್‌ನಲ್ಲಿ ಭಾರತದ ಮೂವರು ಸ್ಪರ್ಧಿಗಳು ಪಾಲ್ಗೊಂಡಿದ್ದು ದೇಶಕ್ಕೆ ಹೆಮ್ಮೆಯ ವಿಚಾರ’ ಎಂದರು.

2024ರ ಡೈಮಂಡ್‌ ಲೀಗ್‌ ಸರಣಿಯಲ್ಲಿ ದೋಹಾ ಲೆಗ್‌ ಮೂರನೇ ಕೂಟವಾಗಿದ್ದು, ವಿಶ್ವದ ನಾಲ್ಕು ಖಂಡಗಳಲ್ಲಿ 15 ಲೆಗ್‌ಗಳು ನಡೆಯಲಿವೆ. ಏ.20ರಂದು ಶಿಯಾಮೆನ್ ಲೆಗ್‌ನಿಂದ ಆರಂಭವಾಗಿ ಬ್ರಸೆಲ್ಸ್‌ನಲ್ಲಿ (ಸೆ.13-14) ನಡೆಯುವ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಶಿಯಾಮೆನ್ ಮತ್ತು ಶಾಂಘೈನಲ್ಲಿ ನಡೆಯುವ ಮೊದಲೆರಡು ಲೆಗ್‌ನಲ್ಲಿ ಪುರುಷರ ಜಾವಲೆನ್‌ ಥ್ರೋ ಸ್ಪರ್ಧೆ ಇರುವುದಿಲ್ಲ.

Highlights - Chopra to begin season with Doha Diamond League on May 10, Jena also to compete for his DL debut New Delhi, Mar 28 (PTI) Reigning Olympic and world champion javelin thrower Neeraj Chopra will begin his season in the Doha leg of the prestigious Diamond League series on May 10 in a star-studded field. The 26-year-old Chopra, who closed his past season with a gold at the Asian Games in Hangzhou, China last year, is aiming to defend his Olympic gold in Paris later this year. Chopra's compatriot Kishore Jena, who finished fifth in the 2023 Budapest World Championships and won silver in Hangzhou with a personal best of 87.54m, will be making his Diamond League debut at the Qatar capital. Chopra will be up against his well-known rivals like Czech Republic's Jakub Vadlejch, who won silver in Tokyo Olympics and bronze in 2023 World Championships and former world champion Anderson Peters of Grenada. “This year, my personal goal is to defend my Olympic title, but it would also mean a lot to me to break the 90m barrier. The Doha Meeting, with good conditions and a great atmosphere, is a perfect opportunity to get my season off to the best start," Chopra, who has a personal best of 89.94m, said. "I’m always overwhelmed by the warm support I get from Indians across the world and in Qatar that is particularly special. I feel privileged that so many people come out to support me and I hope I can repay their faith in me with a good performance.” Others to take the field at the Qatar Sports Club include European champion Julian Weber of Germany (PB 89.54m), Oliver Helander of Germany (PB 89.83m), Qatari record holder Ahmed Bader Magour (PB 85.23m), Lithuanian record holder and World University Games champion Edis Matusevicius (PB 89.17m) and Asian Games bronze medallist Roderick Genki Dean of Japan (PB 84.28m). Chopra had taken the top spot here in the 2023 season with a throw of 88.67m, ahead of Vadlejch and Peters. The javelin event has built a reputation for its high quality in recent years and conditions permitting, much will be expected of the key protagonists on May 10. Peters, who finished third 12 months ago, delivered a national record and the fifth-longest throw in history in 2022 (93.07m), while reigning Diamond League champion Vadlejch, who was runner-up to Chopra in 2023, recorded a personal best in the memorable 2022 meeting with his first ever throw over 90m (90.88m). Chopra’s continued excellence has raised the bar for Indian athletes. “Last year my dream was to win the World Championships, but to have three Indian athletes competing in the final - that shows we’re progressing as a nation,” he said. The Doha Meeting is the third meeting of the 2024 Diamond League series which comprises 15 legs in total across four different continents, starting with Xiamen on April 20 and concluding with a single final across two days in Brussels (September 13-14). The first two meetings in Xiamen and Shanghai do not have men's javelin throw as Diamond League event.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT